ಗಣೇಶ್ ಶೆಣೈಗೆ ಡಾಕ್ಟರೇಟ್ ಪದವಿ

ganesh
Published on

ಕುಂದಾಪುರ: ಮಣಿಪಾಲದ ಮಾಹೆ ವಿ.ವಿ.ಯ ಡಿಪಾರ್ಟ್‌ಮೆಂಟ್ ಆಫ್ ಬೇಸಿಕ್ ಮೆಡಿಕಲ್ ಸೈನ್ಸಸ್, ಫಾರ್ಮಕಾಲಜಿ ವಿಭಾಗದ ಪ್ರಾಧ್ಯಾಪಕ ಕೆ.ಗಣೇಶ್ ಶೆಣೈ ಮಂಡಿಸಿದ ’ಎ ಸ್ಟಡಿ ಟು ಇವ್ಯಾಲ್ಯೂಯೇಟ್ ದಿ ಎಫಿಕಸಿ ಆಫ್ ವೆಟ್ಪಲೈ ತೈಲಂ ಆ್ಯಂಡ್ ಸೀವನಾರ ವೆಂಬು ಕುಳಿ ತೈಲಂ ಇನ್ ಮೌಸ್ ಮಾಡೆಲ್ ಆಫ್ ಸೋರಿಯಾಸಿಸ್’ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಫಾರ್ಮಕಾಲಜಿ ವಿಭಾಗದ ಪ್ರೊ.ಡಾ.ಸ್ಮಿತಾ ಶೆಣೈ ಅವರ ಮಾರ್ಗದರ್ಶನ, ಚರ್ಮರೋಗ ವಿಭಾಗದ ಪ್ರೊ.ಡಾ.ಸತೀಶ್ ಪೈ ಬಿ. ಹಾಗೂ ಬಿಹಾರದ ನೈಪರ್ ಫಾರ್ಮಕಾಲಜಿ ವಿಭಾಗದ ಡಾ. ನಿತೇಶ್ ಕುಮಾರ್ ಅವರ ಸಹ ಮಾರ್ಗದರ್ಶನ ನೀಡಿದ್ದರು. ಇವರು ಕುಂದಾಪುರದ ದಿ. ಕೋಡಿ ಶ್ರೀನಿವಾಸ ಶೆಣೈ ಹಾಗೂ ದಿ.ಪದ್ಮಾ ಶ್ರೀನಿವಾಸ ಶೆಣೈ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net