

ಬೆಳ್ತಂಗಡಿ: ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಪತಿ ಹೋಮ, ಮಕ್ಕಳ ಹೊರಾಂಗಣ ಆಟಿಕೆ ಮೈದಾನ, ರಾಷ್ಟ್ರಧ್ವಜ ಸ್ತಂಭ, ಭಗವಧ್ವಜ ಕಂಬ, ಶುದ್ಧ ಕುಡಿಯುವ ನೀರಿನ ಪ್ಯೂರಿಫೈಯರ್ ಉದ್ಘಾಟನೆ ಹಾಗೂ ಬ್ಯಾಗ್, ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಶಾಸಕ ಹರೀಶ್ ಪೂಂಜ ಧ್ವಜ ಕಂಬ ಉದ್ಘಾಟಿಸಿದರು. ಉದ್ಯಮಿ ಮೋಹನ್ ಕುಮಾರ್ ಮಕ್ಕಳ ಹೊರಾಂಗಣ ಆಟಿಕೆ ಉದ್ಘಾಟಿಸಿದರು. ಬಂದಾರು ಗ್ರಾಪಂ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಶುದ್ಧ ಕುಡಿಯುವ ನೀರಿನ ಪ್ಯೂರಿಫೈಯರ್ ಲೋಕಾರ್ಪಣೆಗೊಳಿಸಿದರು. ಉದಯ ಭಟ್ ಕೊಳಬ್ಬೆ ಅಧ್ಯಕ್ಷತೆ ವಹಿಸಿದ್ದರು.
ಪದ್ಮುಂಜ ಗ್ರಾಪಂ ಅಧ್ಯಕ್ಷ ಸೀತಾರಾಮ ಮಡಿವಾಳ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವೆಂಕಟರಮಣ ಭಟ್, ಪುತ್ತೂರು ಕಬಕ ಪುರೋಹಿತ ದೇವರಾತ ಭಟ್, ಪ್ರಗತಿಪರ ಕೃಷಿಕರಾದ ಚಂದ್ರಹಾಸ ಗೌಡ ದೇವಸ್ಯಗುತ್ತು, ದೇವಿಪ್ರಸಾದ್ ಕಡಮ್ಮಾಜೆ ಫಾರ್ಮ್ಸ್, ಬಂದಾರು ಗ್ರಾಪಂ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ವಿದ್ಯಾರ್ಥಿಗಳು, ಪಾಲಕ ವೃಂದ, ಟ್ರಸ್ಟ್ ಪದಾಧಿಕಾರಿಗಳು, ಮಾತೃ ಮಂಡಳಿ, ಮಾತಾಜಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಭರತೇಶ್ ಪುಣ್ಕೆದಡಿ ಸ್ವಾಗತಿಸಿದರು. ಮಾತಾಜಿ ಪುಷ್ಪಲತ ಕಾರ್ಯಕ್ರಮ ನಿರೂಪಿಸಿದರು. ಉದಯಭಟ್ ಕೊಳಬ್ಬೆ ವಂದಿಸಿದರು.