ತಮಿಳುನಾಡು: ದಕ್ಷಿಣ ಭಾರತ ಖ್ಯಾತಿಯ ಹಲವು ದಿಗ್ಗಜ ನಿರ್ದೇಶಕರಲ್ಲಿ ತಮಿಳಿ ಶಂಕರ್ ಒಬ್ಬರು. ತಾವೇ ನಿರ್ದೇಶನ ಮಾಡಿರುವ ರಾಮ್ ಚರಣ್ ಮತ್ತು ಕಿಯಾರ ಅಡ್ವಾಣಿ ನಟಿಸಿರುವ ಗೇಮ್ ಚೇಂಚರ್(Game Changer) ಸಿನಿಮಾ ನನಗೆ ತೃಪ್ತಿ ನೀಡಲಿಲ್ಲ ಎಂದು ಶಂಕರ್ ಸಂದರ್ಶನವೊಂದರಲ್ಲಿ ಹೇಳಿ ಎಲ್ಲರಿಗೂ ಆಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಕೆಚ್ಚಲು ಕತ್ತರಿಸುವವರಿಗೂ ಸಹಕಾರ: ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಆಕ್ರೋಶ
ಗೇಮ್ ಚೇಂಚರ್ ಸಿನಿಮಾ ಇದೇ ಜ.10ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಆದರೆ, ಸಿನಿ ರಸಿಕರ ನಕರತ್ಮಾಕ(ನೆಗಟಿವ್) ವಿಮರ್ಶೆ ಹಿನ್ನೆಲೆ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂದು ಚಿತ್ರತಂಡದ ಬೇಸರ. ಇದರ ನಡುವೇ ನಿರ್ದೇಶಕ ಶಂಕರ್ ಸಂದರ್ಶನವೊಂದರಲ್ಲಿ ತಮ್ಮದೇ ಸಿನಿಮಾದ ಬಗ್ಗೆ ಅಂಸತೃಪ್ತಿ ವ್ಯಕ್ತಪಡಿಸಿದ್ದಾರೆ.
ಶಂಕರ್ ಹೇಳಿದ್ದೇನು?
ಗೇಮ್ ಚೇಂಚರ್ ಸಿನಿಮಾದಿಂದ ನನಗೆ ತೃಪ್ತಿ ಇಲ್ಲ. ನಾನು ಸಿನಿಮಾ ಇನ್ನು ಚೆನ್ನಾಗಿ ಮಾಡಬಹುದಿತ್ತು. ಆದರೆ, ಸಮಯದ ಅಭಾವದಿಂದ ಒಳ್ಳೆ ದೃಶ್ಯಗಳನ್ನು ಚಿತ್ರದಲ್ಲಿ ಕಟ್ ಮಾಡಲಾಗಿದೆ. ಒಳ್ಳೆಯ ಸಿನಿಮಾವಾಗಲಿದೆ ಎಂಬ ಭರವಸೆ ಇತ್ತು. ಆದರೆ, ಜನರಿಗೆ ಇಷ್ಟವಾಗಿಲ್ಲ. ಹೀಗಾಗಿ, ಈ ಸಿನಿಮಾದಿಂದ ನಾನು ಸಂಪೂರ್ಣ ತೃಪ್ತಿ ಹೊಂದಿಲ್ಲ ಎಂದು ಶಂಕರ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಮೂಲ ಪರಂಪರೆ ಉಳಿಸಿಕೊಂಡಿರುವ ಭಾರತ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ
ಶಂಕರ್ ತಮಿಳಿನ ಖ್ಯಾತ ನಿರ್ದೇಶಕರು. ರೋಬೊ, ರೋಬೊ 2.0, ಇಂಡಿಯನ್, ಭಾಗ-1,2 ಮತ್ತು ಅನ್ನಿಯಾನ್ ಸೇರಿದಂತೆ ಇತರ ಇವರ ಚಿತ್ರಗಳು ಭಾರತ ಚಿತ್ರರಂಗದಲ್ಲಿ ಅವರ ಹೆಸರನ್ನು ಖ್ಯಾತಿಗಳಿಸಿವೆ.(ಏಜೆನ್ಸೀಸ್)
ನಿಮಗೆ ತಿಳಿಯದೆ ನಿಮ್ಮ ದೇಹ ಹಾನಿಯಾಗುವ ಈ ಎಂಟು ಸ್ಥಳಗಳಲ್ಲಿ ನಿಮ್ಮ ಫೋನ್ನನ್ನು ಇಡಲೇಬೇಡಿ! | Phone