

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚೆಡೇಕ್ಕಲ್ ಸನಿಹ ಜೂಜಾಟದಲ್ಲಿ ನಿರತರಾಗಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಎಂಟು ಮಂದಿ ಪರಾರಿಯಾಗಿದ್ದಾರೆ.
ಬೇಳ ಉಳ್ಳೋಡಿ ನಿವಾಸಿ ಡಿ.ವಿಜಯನ್, ಕೊಟ್ಟೋಡಿ ನಿವಾಸಿ ಸಿ.ಕೆ ಸಲಾಂ, ಚೆಂಗಳ ನಿವಾಸಿ ಅಶ್ರಫ್, ಪೇರಾಲ್ ಕಣ್ಣೂರು ನಿವಾಸ ಎನ್.ಯತೀಶ, ಕಾರಡ್ಕ ನಿವಾಸಿ ಕೆ.ರಾಘವನ್, ಮುಳಳೇರಿಯ ಅಡ್ಕ ನಿವಾಸಿ ಎಂ.ಕೆ ಶಶಿ, ಕಳ್ಳಾರ್ ನಿವಾಸಿ ನೌಶಾದ್ ಬಂಧಿತರು. ಜೂಜಿಗೆ ಬಳಸಿದ್ದರೆನ್ನಲಾದ 20140ರೂ. ನಗದು ವಶಪಡಿಸಿಕೊಂಡಿದ್ದಾರೆ. ರಸ್ತೆಯಿಂದ ಅನತಿ ದೂರದಲ್ಲಿ ಟಾರ್ಪಾಲಿನ್ ಹೊದಿಸಿದ ಶೆಡ್ಡಿನಲ್ಲಿ 15ಕ್ಕೂ ಹೆಚ್ಚುಮಂದಿ ಜೂಜಾಟದಲ್ಲಿ ನಿರತರಾಗಿದ್ದ ಸಂದರ್ಭ ಕಾರ್ಯಾಚರಣೆ ನಡೆಸಲಾಗಿದೆ.