ಚಳಿಗಾಲದಲ್ಲಿ ಪ್ರವಾಸಕ್ಕೆ ಪ್ಲಾನ್​ ಮಾಡುತ್ತಿದ್ದೀರಾ? ಹಾಗಾದರೆ ಇಲ್ಲಿವೆ ನೋಡಿ ಬೆಸ್ಟ್ ಪ್ರವಾಸಿ​ ತಾಣಗಳು! Winter Spots

ಚಳಿಗಾಲದ ಪ್ರವಾಸ
ಚಳಿಗಾಲದ ಪ್ರವಾಸ
Published on
Winter Spots

ಚಳಿಗಾಲದ ಪ್ರವಾಸ

ಈ ಚಳಿಗಾಲದಲ್ಲಿ ನೀವು ಭಾರತದಲ್ಲಿ ಭೇಟಿ ನೀಡಬಹುದಾದ 8 ಉತ್ತಮ ಪ್ರವಾಸಿ ತಾಣಗಳ ಬಗ್ಗೆ ನಾವಿಂಗು ತಿಳಿದುಕೊಳ್ಳೋಣ.
Winter Spots

ಗೋವಾ

ಹಿತಕರವಾದ ತಾಪಮಾನದಲ್ಲಿ ಬೀಚ್‌ಗಳು, ರಾತ್ರಿಜೀವನ ಮತ್ತು ಪೋರ್ಚುಗೀಸ್ ವಾಸ್ತುಶಿಲ್ಪವನ್ನು ಆನಂದಿಸಲು ಗೋವಾ ಈ ಚಳಿಗಾಲದಲ್ಲಿ ಸೂಕ್ತವಾಗಿದೆ.
Winter Spots

ಕೇರಳ (ಬ್ಯಾಕ್‌ವಾಟರ್ಸ್)

ಕೇರಳದ ಹಿನ್ನೀರು ಪ್ರದೇಶಗಳು ಮತ್ತು ಹೌಸ್‌ಬೋಟ್‌ಗಳಲ್ಲಿ ಈ ಚಳಿಗಾಲದಲ್ಲಿ ಒಂದು ಉತ್ತಮ ಪ್ರವಾಸದ ಅನುಭವವನ್ನು ಪಡೆಯಬಹುದಾಗಿದೆ.
Winter Spots

ರಾಜಸ್ಥಾನ (ಜೈಪುರ/ಉದಯಪುರ)

ಹಗಲಿನಲ್ಲಿ ಬೆಚ್ಚನೆಯ ಸೂರ್ಯನ ತಾಪಮಾನದೊಂದಿಗೆ ಭವ್ಯವಾದ ಕೋಟೆಗಳು ಮತ್ತು ಅರಮನೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
Winter Spots

ಊಟಿ, ತಮಿಳುನಾಡು

ತಂಪಾದ ಮತ್ತು ಆಹ್ಲಾದಕರ ಹವಾಮಾನದಲ್ಲಿ ನೀಲಗಿರಿ ಬೆಟ್ಟಗಳ ವಿಹಂಗಮ ನೋಟ ಮತ್ತು ಚಹಾ ತೋಟಗಳನ್ನು ಈ ಚಳಿಗಾಲದಲ್ಲಿ ಆನಂದಿಸಬಹುದು.
Winter Spots

ಔಲಿ, ಉತ್ತರಾಖಂಡ

ಹಿಮಾಲಯದ ವಿಹಂಗಮ ನೋಟಗಳು ಮತ್ತು ಚಳಿಗಾಲದ ಕ್ರೀಡೆಗಳಿಗೆ (ಸ್ಕೀಯಿಂಗ್) ಹೆಸರುವಾಸಿಯಾದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ.
Winter Spots

ಗ್ಯಾಂಗ್ಟಾಕ್, ಸಿಕ್ಕಿಂ

ಹಿಮಾಲಯ ಸರಣಿಯ ಪ್ರಶಾಂತ ಮತ್ತು ಸುಂದರ ನೋಟಗಳನ್ನು ನೋಡಲು ಚಳಿಗಾಲ ಉತ್ತಮ ಸಮಯ. ಆದರೆ, ತಾಪಮಾನ ವಿಪರೀತ ತಂಪಾಗಿರುತ್ತದೆ.
Winter Spots

ಕಚ್‌ನ ರಣ್, ಗುಜರಾತ್

ದೊಡ್ಡ ಬಿಳಿ ಮರುಭೂಮಿಯ ಸೌಂದರ್ಯವನ್ನು 'ರಣ್ ಉತ್ಸವ' ದೊಂದಿಗೆ ಈ ಚಳಿಗಾಲದಲ್ಲಿ ಕಣ್ತುಂಬಿಕೊಳ್ಳಬಹುದು.
Winter Spots

ಗಮನಿಸಿ

ತುಂಬಾ ಚಳಿಯಿರುವ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುವಾಗ ದೇಹವನ್ನು ಬೆಚ್ಚಗೆ ಇಡುವ ಬಹುಪದರದ ಬಟ್ಟೆಗಳನ್ನು ಧರಿಸಿ, ಹೈಡ್ರೇಟೆಡ್ ಆಗಿರಿ, ಹೈಪೋಥರ್ಮಿಯಾ ಮತ್ತು ಫ್ರಾಸ್ಟ್‌ಬೈಟ್ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಿ. ಅಲ್ಲದೆ, ಅಗತ್ಯ ಔಷಧಗಳು ಮತ್ತು ತುರ್ತು ಸಾಮಗ್ರಿಗಳು ನಿಮ್ಮ ಬಳಿಯಿರಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net