ಬೇಸಿಗೆಯಲ್ಲಿ ಮೊಸರನ್ನು ಏಕೆ ಸೇವಿಸಬಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಮೊಸರಿನ ಉಷ್ಣ ಗುಣ
ಮೊಸರಿನ ಉಷ್ಣ ಗುಣ
Published on
ಮೊಸರಿನ ಉಷ್ಣ ಗುಣ

ಮೊಸರಿನ ಉಷ್ಣ ಗುಣ

ನಮಗೆ ಮೊಸರು ತಣ್ಣಗೆ ಅನಿಸಿದರೂ, ಆಯುರ್ವೇದದ ಪ್ರಕಾರ ಮೊಸರು ಉಷ್ಣ ವೀರ್ಯ ಹೊಂದಿದೆ. ಬೇಸಿಗೆಯಲ್ಲಿ ಈಗಾಗಲೇ ವಾತಾವರಣದಲ್ಲಿ ಶಾಖ ಹೆಚ್ಚಿರುವುದರಿಂದ, ಮೊಸರು ಸೇವನೆಯು ದೇಹದ ಒಳಗಿನ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಬಹುದು.
ಜೀರ್ಣಕ್ರಿಯೆಗೆ ಜಡ

ಜೀರ್ಣಕ್ರಿಯೆಗೆ ಜಡ

ಮೊಸರು ಜೀರ್ಣಿಸಿಕೊಳ್ಳಲು ಕಷ್ಟವಾದ ಆಹಾರ (Guru). ಬೇಸಿಗೆಯಲ್ಲಿ ನಮ್ಮ ಜೀರ್ಣಶಕ್ತಿ ನೈಸರ್ಗಿಕವಾಗಿ ಸ್ವಲ್ಪ ಕಡಿಮೆ ಇರುತ್ತದೆ. ಅಂತಹ ಸಮಯದಲ್ಲಿ ಮೊಸರು ಸೇವಿಸಿದರೆ ಅದು ಸರಿಯಾಗಿ ಜೀರ್ಣವಾಗದೆ ಅಜೀರ್ಣ, ಉಬ್ಬರ ಅಥವಾ ಮಲಬದ್ಧತೆಗೆ ಕಾರಣವಾಗಬಹುದು.
ದೋಷಗಳ ಅಸಮತೋಲನ

ದೋಷಗಳ ಅಸಮತೋಲನ

ಮೊಸರು ದೇಹದಲ್ಲಿ ಪಿತ್ತ ಮತ್ತು ಕಫ ದೋಷಗಳನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಈಗಾಗಲೇ ಪಿತ್ತ ಹೆಚ್ಚಿರುವುದರಿಂದ, ಮೊಸರು ತಿನ್ನುವುದರಿಂದ ದೇಹದಲ್ಲಿ ಉರಿತ, ಮೊಡವೆಗಳು ಅಥವಾ ಚರ್ಮದ ತುರಿಕೆ ಕಾಣಿಸಿಕೊಳ್ಳಬಹುದು.
ಚರ್ಮದ ಸಮಸ್ಯೆಗಳು

ಚರ್ಮದ ಸಮಸ್ಯೆಗಳು

ಮೊಸರು ರಕ್ತದ ಮೇಲೆ ಪ್ರಭಾವ ಬೀರುತ್ತದೆ. ಬೇಸಿಗೆಯ ಬಿಸಿಲಿನಲ್ಲಿ ಮೊಸರು ಅತಿಯಾಗಿ ಸೇವಿಸುವುದರಿಂದ ರಕ್ತ ಪಿತ್ತ ಉಂಟಾಗಿ ಚರ್ಮದ ಮೇಲೆ ಅಲರ್ಜಿ, ದದ್ದುಗಳು ಅಥವಾ ಬೆವರು ಸಾಲೆಯಂತಹ ಸಮಸ್ಯೆಗಳು ತೀವ್ರಗೊಳ್ಳಬಹುದು.
ಊತ ಮತ್ತು ನೀರು ಶೇಖರಣೆ

ಊತ ಮತ್ತು ನೀರು ಶೇಖರಣೆ

ಮೊಸರು ಅಭಿಷ್ಯಂದಿ ಗುಣವನ್ನು ಹೊಂದಿದೆ, ಅಂದರೆ ಇದು ದೇಹದ ಸಣ್ಣ ರಂಧ್ರಗಳನ್ನು ಮುಚ್ಚಬಹುದು. ಇದು ದೇಹದಲ್ಲಿ ನೀರಿನಂಶ ಶೇಖರಣೆಯಾಗಲು ಮತ್ತು ಕೀಲುಗಳಲ್ಲಿ ಅಥವಾ ಮುಖದಲ್ಲಿ ಸಣ್ಣ ಮಟ್ಟದ ಊತ ಕಾಣಿಸಿಕೊಳ್ಳಲು ಕಾರಣವಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net