ನಮ್ಮ ದೇಶದಲ್ಲಿ ಕುಡಿಯುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಸಂಬಳ ಆದಾಗ, ಜನ್ಮದಿನದ ಪಾರ್ಟಿ, ಔತಣಕೂಟ, ಹೊಸ ವಾಹನ ಖರೀದಿ, ಲವ್ ಫೇಲ್ಯೂರ್ ಹೀಗೆ ಯಾವುದಾದರೂ ಒಂದು ಕಾರಣವನ್ನು ನೆಪವೊಡ್ಡಿ ಕುಡಿತಕ್ಕೆ ಕೂರುವವರು ಹೆಚ್ಚು ಮಂದಿ
ಮದ್ಯ ಆರೋಗ್ಯಕ್ಕೆ ಹಾನಿಕಾರಕ
ಮದ್ಯದ ಬಾಟಲಿಯ ಮೇಲೆ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಸೂಚನೆ ಮದ್ಯವ್ಯಸನಿಗಳಿಗೆ ಎಚ್ಚರಿಕೆ ಘಂಟೆಯಾಗಿರುತ್ತದೆ. ಅಷ್ಟಾದರೂ ಕುಡಿಯುವುದರಿಂದ ಒಂದು ಹೆಜ್ಜೆ ಹಿಂದೆ ಹಾಕುವುದಿಲ್ಲ
ಆರಂಭದಲ್ಲಿ ಮಾತೃಭಾಷೆ ಬಳಿಕ ಇಂಗ್ಲಿಷ್
ಕಂಠಪೂರ್ತಿ ಕುಡಿದ ಸ್ನೇಹಿತ ಅಥವಾ ವ್ಯಕ್ತಿ, ಆರಂಭದಲ್ಲಿ ಮಾತೃಭಾಷೆಯಲ್ಲಿ ಮಾತನಾಡಿ, ನಂತರ ಏಕಾಏಕಿ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಗಮನಿಸಿದ್ದೀರಾ? ಅಷ್ಟೋ-ಇಷ್ಟೋ ಆಂಗ್ಲ ಭಾಷೆ ಗೊತ್ತಿರುವ ಇವರು, ಸಾಮಾನ್ಯವಾಗಿ ಎಲ್ಲರ ಎದುರು ಧೈರ್ಯದಿಂದ ಮಾತನಾಡಲು ಹಿಂಜರಿಯುತ್ತಾರೆ
ಅಧ್ಯಯನದ ಪ್ರಕಾರ
ಕುಡಿದ ಬಳಿಕ ನಮ್ಮ ನಡವಳಿಕೆ ನಮ್ಮ ಅರಿವಿಗೆ ಬಾರದಂತೆ ಬದಲಾಗುತ್ತದೆ. ಅದರ ಒಂದು ಭಾಗ ಭಾಷೆಯಲ್ಲಿನ ಬದಲಾವಣೆ. ಅತಿಯಾಗಿ ಕುಡಿಯುವವರು ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News