ದೂರ ಇದ್ರೆ ಒಳ್ಳೆಯದುಮಖಾನ ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿದ್ದರು ಕೂಡ ಕೆಲವು ಮಂದಿ ಮಖಾನದಿಂದ ದೂರ ಇರುವುದು ತುಂಬಾ ಒಳ್ಳೆಯದು..ಇಂಥವರು ದೂರ ಇರಿಮೂತ್ರಪಿಂಡದ ಸಮಸ್ಯೆ, ಕಡಿಮೆ ರಕ್ತದೊತ್ತಡ, ಮಲಬದ್ಧತೆ ಅಥವಾ ಜೀರ್ಣಕಾರಿ ಸಮಸ್ಯೆ, ಅಲರ್ಜಿ ಇರುವವರು, ಮಧುಮೇಹ ಹಾಗೂ ಆಹಾರ ಕ್ರಮ ಪಾಲಿಸುವ ಜನರು ಮಖಾನದಿಂದ ದೂರವಿದ್ದರೆ ಒಳ್ಳೆಯದು..ಮಲಬದ್ಧತೆಮಖಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರ ಉಂಟಾಗಬಹುದು..ತೂಕ ಹೆಚ್ಚಳತುಪ್ಪ ಅಥವಾ ಎಣ್ಣೆಯಿಂದ ಹುರಿದ ಮಖಾನವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಹೆಚ್ಚಿಸಲು ಕಾರಣವಾಗಬಹುದು..ಅಲರ್ಜಿಅಲರ್ಜಿ ಇರುವರು ಮಖಾನ ತಿನ್ನುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ, ಕೆಲವರಲ್ಲಿ ಮಖಾನ ಅಲರ್ಜಿ ಪ್ರತಿಕ್ರಿಯೆ ಉಂಟು ಮಾಡಬಹುದು..ರಕ್ತದೊತ್ತಡಮಖಾನದಲ್ಲಿರುವ ಹೆಚ್ಚಿನ ಪೊಟ್ಯಾಸಿಯಂ, ಕಡಿಮೆ ರಕ್ತದೊತ್ತಡ ಹೊಂದಿರುವ ಜನರಲ್ಲಿ ಬಿಪಿ ಮತ್ತಷ್ಟು ಕಡಿಮೆಯಾಗಲು ಕಾರಣವಾಗಬಹುದು..ಮೂತ್ರಪಿಂಡಅಧಿಕವಾಗಿರುವ ಪೊಟ್ಯಾಸಿಯಂ ಮೂತ್ರಪಿಂಡದ ಸಮಸ್ಯೆಗಳಿರುವ ಜನರಿಗೆ ಹಾನಿಕಾರಕವಾಗಬಹುದು..ಗ್ಲೂಕೋಸ್ ಮಟ್ಟಮಧುಮೇಹ ಇರುವವರು ಹೆಚ್ಚು ತಿಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಬದಲಾವಣೆಗಳನ್ನು ಅನುಭವಿಸಬಹುದು..ಗಮನಿಸಿಮಖಾನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಅತಿಯಾಗಿ ಸೇವಿಸಬಾರದು. ಸೇವಿಸಿದರೆ ಆರೋಗ್ಯ ಸಮಸ್ಯೆ ಕಾಡಬಹುದು.