ಇವೆರೆಡು ದೇಹಕ್ಕೆ ಪೌಷ್ಟಿಕಾಂಶದ ಮೌಲ್ಯ, ಜೀರ್ಣಸಾಧ್ಯತೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ, ಪೌಷ್ಟಿಕಾಂಶದ ವಿಷಯದಲ್ಲಿ ಈ ಎರಡರ ನಡುವೆ ಹಲವು ವ್ಯತ್ಯಾಸಗಳಿವೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.
ಕೋಳಿ ಮಾಂಸವು....
ಕೋಳಿ ಮಾಂಸವು ಸ್ನಾಯುಗಳ ಬೆಳವಣಿಗೆ, ತೂಕ ನಿಯಂತ್ರಣ ಮತ್ತು ಫಿಟ್‌ನೆಸ್ ಸುಧಾರಣೆಗೆ ಬಹಳ ಮುಖ್ಯವಾಗಿದೆ. ಏಕೆಂದರೆ, ಇದು ದೇಹದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಬಿ6, ಬಿ12, ಸತು ಮತ್ತು ಕಬ್ಬಿಣದಂತಹ ಅಂಶಗಳಿವೆ.
ಮೀನು ಆರೋಗ್ಯಕರ ಮಾಂಸಗಳಲ್ಲಿ ಒಂದು
ಮೀನು ಆರೋಗ್ಯಕರ ಮಾಂಸಗಳಲ್ಲಿ ಒಂದು. ಇದರಲ್ಲಿ ನೈಸರ್ಗಿಕವಾಗಿ ಕಂಡುಬರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯ, ಮಿದುಳಿನ ಬೆಳವಣಿಗೆ ಮತ್ತು ಮೆಮೋರಿ ಪವರ್ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವವರಿಗೆ ಸೂಕ್ತ
ಮೀನು ಮಕ್ಕಳು, ವೃದ್ಧರು ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವವರಿಗೆ ಹೆಚ್ಚು ಸೂಕ್ತವಾಗಿದೆ. ಏಕೆಂದರೆ, ಮೀನು ಕೋಳಿ ಮಾಂಸಕ್ಕಿಂತ ವೇಗವಾಗಿ ಜೀರ್ಣವಾಗುತ್ತದೆ.
ಚಿಕನ್, ಮೀನು ಎರಡಲ್ಲೂ ಆರೋಗ್ಯ ಪ್ರಯೋಜನಗಳಿವೆ
ಅಲ್ಲದೆ, ಅದರಲ್ಲಿರುವ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಒಟ್ಟಾರೆಯಾಗಿ, ಕೋಳಿ ಮತ್ತು ಮೀನು ಎರಡೂ ವಿಶಿಷ್ಟ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.