ಚಳಿಗಾಲದಲ್ಲಿ ನಿಮ್ಮ ಮನೆಯನ್ನು ಈ ರೀತಿ ಇಟ್ಟುಕೊಳ್ಳಿ... ಇಲ್ಲದಿದ್ರೆ ಆರೋಗ್ಯ ಸಮಸ್ಯೆ ಕಾಡೋದು ಖಚಿತ!

ಹೀಗಿರಲಿ ನಿಮ್ಮ ಮನೆ
ಹೀಗಿರಲಿ ನಿಮ್ಮ ಮನೆ
Published on
winter Season

ಹೀಗಿರಲಿ ನಿಮ್ಮ ಮನೆ

ಚಳಿಗಾಲದಲ್ಲಿ ಎಲ್ಲೆಡೆ ವಾತಾವರಣ ತಂಪಾಗಿರುವುದರಿಂದ ನಿಮ್ಮ ಮನೆಯನ್ನು ಬೆಚ್ಚಗೆ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾದರೆ, ಚಳಿಗಾಲದಲ್ಲಿ ಮನೆ ಹೇಗಿರಬೇಕು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
winter Season

ಕಿಟಕಿ ಮತ್ತು ಬಾಗಿಲುಗಳ ನಿರ್ವಹಣೆ

ಹಗಲಿನಲ್ಲಿ ಸೂರ್ಯನ ಬೆಳಕು ಬೀಳುವಾಗ ಕಿಟಕಿಗಳನ್ನು ತೆರೆದಿಡಿ. ಇದರಿಂದ ನೈಸರ್ಗಿಕವಾಗಿ ಮನೆ ಬೆಚ್ಚಗಾಗುತ್ತದೆ. ಆದರೆ, ಸೂರ್ಯ ಮುಳುಗಿದ ತಕ್ಷಣ ಕಿಟಕಿ-ಬಾಗಿಲುಗಳನ್ನು ಸರಿಯಾಗಿ ಮುಚ್ಚಿ, ಹೊರಗಿನ ತಣ್ಣಗಿನ ಗಾಳಿ ಒಳಬರದಂತೆ ತಡೆಯಿರಿ.
winter Season

ದಪ್ಪನೆಯ ಪರದೆಗಳ ಬಳಕೆ

ಕಿಟಕಿಗಳಿಗೆ ದಪ್ಪನೆಯ ಬಟ್ಟೆಯ ಪರದೆಗಳನ್ನು (Curtains) ಬಳಸಿ. ಇವು ಹೊರಗಿನ ಚಳಿಯನ್ನು ತಡೆದು ಕೋಣೆಯ ಒಳಗಿನ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
winter Season

ನೆಲಕ್ಕೆ ಕಾರ್ಪೆಟ್ ಅಥವಾ ಚಾಪೆ ಹಾಕಿ

ಚಳಿಗಾಲದಲ್ಲಿ ನೆಲ ತುಂಬಾ ತಂಪಾಗಿರುತ್ತದೆ. ಇದನ್ನು ತಪ್ಪಿಸಲು ಲಿವಿಂಗ್ ರೂಮ್ ಅಥವಾ ಬೆಡ್‌ರೂಮ್‌ ನೆಲದ ಮೇಲೆ ಕಾರ್ಪೆಟ್, ರಗ್ ಅಥವಾ ಹುಲ್ಲಿನ ಚಾಪೆಗಳನ್ನು ಹಾಸಿ. ಇದು ಪಾದಗಳಿಗೆ ಹಿತವೆನಿಸುತ್ತದೆ.
winter Season

ಬೆಚ್ಚಗಿನ ಹಾಸಿಗೆ ಮತ್ತು ಹೊದಿಕೆ

ಹಾಸಿಗೆಯ ಮೇಲೆ ಹತ್ತಿಯ ದಪ್ಪನೆಯ ಬೆಡ್‌ಶೀಟ್ ಮತ್ತು ಉಣ್ಣೆಯ ಹೊದಿಕೆಗಳನ್ನು ಬಳಸಿ. ಮಲಗುವ ಮುನ್ನ ಹಾಸಿಗೆಯನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಹಾಕುವುದರಿಂದ ಹೆಚ್ಚು ಬೆಚ್ಚಗಿರುತ್ತದೆ.
winter Season

ಒಳಾಂಗಣ ಸಸ್ಯಗಳು

ಮನೆಯ ಒಳಗಿನ ಗಾಳಿಯ ಗುಣಮಟ್ಟವನ್ನು ಕಾಪಾಡಲು ಸ್ನೇಕ್ ಪ್ಲಾಂಟ್ ಅಥವಾ ಅಲೋವೆರಾದಂತಹ ಗಿಡಗಳನ್ನು ಇರಿಸಿ. ಇವು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ, ಗಾಳಿಯನ್ನು ಶುದ್ಧವಾಗಿಡುತ್ತವೆ.
winter Season

ಸರಿಯಾದ ಬೆಳಕಿನ ವ್ಯವಸ್ಥೆ

ಚಳಿಗಾಲದಲ್ಲಿ ಬೇಗ ಕತ್ತಲಾಗುವುದರಿಂದ ಮನೆಯಲ್ಲಿ ಹಳದಿ ಮಿಶ್ರಿತ ಬೆಳಕಿನ ಬಲ್ಬ್‌ಗಳನ್ನು ಬಳಸಿ. ಇದು ಮನೆಗೆ ಒಂದು ರೀತಿಯ ಹಿತವಾದ ಮತ್ತು ಬೆಚ್ಚಗಿನ ಅನುಭವ ನೀಡುತ್ತದೆ.
winter Season

ಶುಚಿತ್ವ ಮತ್ತು ಅಡುಗೆಮನೆ

ಮನೆಯಲ್ಲಿ ಧೂಳು ಸೇರದಂತೆ ನೋಡಿಕೊಳ್ಳಿ, ಏಕೆಂದರೆ ಚಳಿಗಾಲದಲ್ಲಿ ಅಲರ್ಜಿ ಮತ್ತು ಅಸ್ತಮಾ ಸಮಸ್ಯೆ ಹೆಚ್ಚಾಗಬಹುದು. ಅಡುಗೆಮನೆಯಲ್ಲಿ ಶುಂಠಿ, ಕಾಳುಮೆಣಸಿನಂತಹ ಪದಾರ್ಥಗಳ ಬಳಕೆ ಹೆಚ್ಚಿರಲಿ, ಅವು ಮನೆಯ ವಾತಾವರಣದಲ್ಲೂ ಒಂದು ರೀತಿಯ ಉಲ್ಲಾಸ ನೀಡುತ್ತವೆ.
winter Season

ನಮ್ಮ ಮನೆಯೇ ಅಂತಿಮ

ನಾವು ಎಲ್ಲೇ ಹೋದರು ಅಂತಿಮವಾಗಿ ಸೇರುವುದು ನಮ್ಮ ಮನೆಯನ್ನೇ ಹೀಗಾಗಿ, ನಮ್ಮ ಮನೆಯನ್ನು ಚಳಿಗಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುವುದು ತುಂಬಾನೇ ಮುಖ್ಯ. ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net