ಬೆಲ್ಲ ಸೇವನೆಯು ಸಕ್ಕರೆಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಆಯುರ್ವೇದ ಹೇಳುತ್ತದೆ. ಹಾಗಾದರೆ, ಬೆಲ್ಲ ತಿನ್ನುವುದರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಹೊಟ್ಟೆ ಉಬ್ಬರ
ನಿಯಮಿತ ಬೆಲ್ಲ ಸೇವನೆಯು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಗ್ಯಾಸ್, ಆಸಿಡಿಸಿ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
ರಕ್ತ ಶುದ್ಧಿ
ಬೆಲ್ಲವು ಕಬ್ಬಿಣದಂತಹ ಅಗತ್ಯ ಖನಿಜಗಳನ್ನು ಹೊಂದಿರುವುದರಿಂದ ರಕ್ತಶುದ್ಧಿ ಮಾಡಿ ರಕ್ತಕ್ಷೀಣತೆ ಹಾಗೂ ರಕ್ತ ಹೀನತೆಯನ್ನು ತಡೆಯುತ್ತದೆ.
ರೋಗ ನಿರೋಧಕ ಶಕ್ತಿ
ಬೆಲ್ಲದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳಿಂದ ನಮ್ಮ ದೇಹಕ್ಕೆ ರಕ್ಷಣೆ ನೀಡುತ್ತದೆ.
ಶುದ್ಧ ರಕ್ತ ಉತ್ಪಾದನೆ
ಬೆಲ್ಲದಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ಡಿಟಾಕ್ಸಿಫೈ ಮಾಡಿ ಶುದ್ಧ ರಕ್ತವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ದೈಹಿಕ ಶ್ರಮ
ನಿಯಮಿತವಾಗಿ ಬೆಲ್ಲವನ್ನು ಸೇವಿಸುವುದರಿಂದ ಅದರಲ್ಲಿರುವ ಎನರ್ಜಿ ದೈಹಿಕ ಶ್ರಮವನ್ನು ದೂರ ಮಾಡುತ್ತದೆ.
ಮಲಬದ್ಧತೆ
ಬೆಲ್ಲವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ಕರುಳಿನ ಚಲನೆ ಉತ್ತೇಜಿಸುವ ಮೂಲಕ ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ. ಏಕೆಂದರೆ ಬೆಲ್ಲದಲ್ಲಿ ಫೈಬರ್ ಮತ್ತು ಸುಕ್ರೋಸ್ ಅಂಶವಿದೆ.
ಹೃದಯದ ಆರೋಗ್ಯ
ಬೆಲ್ಲವು ಪ್ರಾಥಮಿಕವಾಗಿ ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುವ ಮೂಲಕ ಹೃದಯದ ಆರೋಗ್ಯ ಬೆಂಬಲಿಸುತ್ತದೆ.
ರಕ್ತದೊತ್ತಡ ನಿಯಂತ್ರಣ
ಬೆಲ್ಲವು ರಕ್ತದೊತ್ತಡ ನಿಯಂತ್ರಿಸಲು, ರಕ್ತನಾಳಗಳನ್ನು ಸಡಿಲಗೊಳಿಸಲು ಮತ್ತು ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ.