ಜೋಳದ ಹಿಟ್ಟು ಸಾಮಾನ್ಯವಾಗಿ ರೊಟ್ಟಿ, ಮುದ್ದೆಯನ್ನು ಮಾಡಲು ಬಯಸುತ್ತಾರೆ. ಇದು ಪೌಷ್ಟಿಕಾಂಶಗಳಿಂದ ಕೂಡಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಮಧುಮೇಹ ನಿಯಂತ್ರಣಕ್ಕೆ ಸಹಾಯಕ
ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಜೊತೆಗೆ ಹೇರಳ ಫೈಬರ್ ಇರುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ಸುಧಾರಿಸುತ್ತದೆ.
ತೂಕ ಇಳಿಸಲು ಅದ್ಭುತ
100 ಗ್ರಾಂ ಜೋಳದ ಹಿಟ್ಟಿನಲ್ಲಿ ಸುಮಾರು 8–10 ಗ್ರಾಂ ಫೈಬರ್ ಇರುತ್ತದೆ. ಇದು ಬಹಳ ಸಮಯ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಕ್ಯಾಲೊರಿ ಕಡಿಮೆಯಾಗಿ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ಕಣ್ಣು, ಚರ್ಮ ಮತ್ತು ಕೂದಲಿಗೆ ಒಳ್ಳೆಯದು
ಜೋಳದ ಹಿಟ್ಟಿನಲ್ಲಿ ವಿಟಮಿನ್ A, B6, ಜೀಯಾಕ್ಸಾಂಥಿನ್, ಲ್ಯೂಟೀನ್ ಜಾಸ್ತಿ. ಇವು ಕಣ್ಣಿನ ಆರೋಗ್ಯ ಕಾಪಾಡುತ್ತವೆ ಜೊತೆಗೆ ಚರ್ಮದಲ್ಲಿ ಕಾಲೇಜನ್ ಹೆಚ್ಚಿಸಿ, ಕೂದಲನ್ನು ಸದೃಢ ಪಡಿಸುತ್ತದೆ.
ಹೃದಯಕ್ಕೆ ಮಿತ್ರ
ಇದರಲ್ಲಿ ಒಳ್ಳೆಯ ಕೊಬ್ಬು, ಪೊಟ್ಯಾಸಿಯಮ್, ಮೆಗ್ನೀಷಿಯಮ್ ಇರುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ
ಜೋಳದ ಹಿಟ್ಟಿನಲ್ಲಿ ಗ್ಲೂಟನ್ ಇಲ್ಲದ ಕಾರಣ ಸೆಲಿಯಾಕ್ ರೋಗಿಗಳು ಮತ್ತು ಗೋಧಿ ಅಲರ್ಜಿ ಇರುವವರು ಯಾವ ಭಯವಿಲ್ಲದೇ ತಿನ್ನಬಹುದು. ಇದು ಜೀರ್ಣವಾಗಿಸಲು ಸುಲಭವಾಗುತ್ತದೆ ಜೊತೆಗೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.