ತೂಕ ಇಳಿಸಿಕೊಳ್ಳುವುದು ಸುಲಭವಾದ ಮಾತೇನಲ್ಲ. ಯಶಸ್ವಿ ತೂಕ ನಷ್ಟಕ್ಕೆ ಪ್ರಮುಖ ಕಾರಣವೆಂದರೆ ಕ್ಯಾಲೊರಿಗಳನ್ನು ಎಣಿಸುವುದು ಮಾತ್ರವಲ್ಲ. ಬದಲಾಗಿ ನಿಮ್ಮ ಆಹಾರದ ಆಯ್ಕೆಗಳ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯವಾಗಿರುತ್ತದೆ.
ಸಕ್ಕರೆ ಪಾನೀಯಗಳು
ಸೋಡಾ, ಸಿಹಿಗೊಳಿಸಿದ ಕಾಫಿ, ಹಣ್ಣಿನ ರಸದಂತಹ ಪಾನೀಯಗಳು ಸಕ್ಕರೆ ಮತ್ತು ಕ್ಯಾಲೋರಿಗಳಿಂದ ತುಂಬಿರುತ್ತದೆ. ಆದರೆ, ಇವು ಪೌಷ್ಟಿಕಾಂಶಗಳನ್ನು ಹೊಂದಿರುವುದಿಲ್ಲ. ಇವುಗಳ ಸೇವನೆಯು ದೇಹದ ಹೆಚ್ಚುವರಿ ಕ್ಯಾಲೊರಿಗೆ ಕಾರಣವಾಗಬಹುದು.
ತ್ವರಿತ ಆಹಾರ
ಈ ಪಾಸ್ಟ್ಫುಡ್ಗಳಲ್ಲಿ ಅನಾರೋಗ್ಯಕರ ಕೊಬ್ಬು, ದೇಹದಲ್ಲಿ ಸಕ್ಕರೆ ಹೆಚ್ಚಳ ಮತ್ತು ಕ್ಯಾಲೊರಿಗಳಿಂದ ತುಂಬಿರುತ್ತದೆ. ಹೆಚ್ಚಾಗಿ ಈ ಆಹಾರ ಸೇವಿಸುವುದರಿಂದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ.
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು
ಸಂಸ್ಕರಿಸಿದ ಧಾನ್ಯಗಳಲ್ಲಿ ನಾರಿನಂಶ ಕಡಿಮೆಯಿರುವುದರಿಂದ ಇದು ದೇಹದಲ್ಲಿ ಸಕ್ಕರೆ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ಇದನ್ನು ಸೇವಿಸಿದ ಕೆಲವೇ ಸಮಯದ ನಂತರ ಪುನಃ ಹಸಿವಾಗಲು ಪ್ರಾರಂಭಿಸುತ್ತದೆ.
ಸಂಸ್ಕರಿಸಿದ ಆಹಾರಗಳು
ಚಿಪ್ಸ್, ಕ್ರ್ಯಾಕರ್ಸ್ ಮತ್ತು ಸಂಸ್ಕರಿಸಿದ ತಿಂಡಿಗಳಲ್ಲಿ ಕ್ಯಾಲರಿ ಹೆಚ್ಚಾಗಿರುತ್ತದೆ. ಈ ಆಹಾರಗಳನ್ನು ರುಚಿಗಾಗಿ ತಯಾರಿಸಲಾಗಿರುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ತೂಕ ಹೆಚ್ಚಾಗಬಹುದು.
ಮಸಾಲೆಗಳು
ಮೇಯನೇಸ್, ಸಾಸ್, ಕೆಚಪ್ನಂತಹ ಕಾಂಡಿಮೆಂಟ್ಗಳು ಸೇರಿರುವ ಆಹಾರವನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಇವು ರುಚಿಯನ್ನು ಹೆಚ್ಚಿಸುತ್ತದೆ. ಆದರೆ, ಅವುಗಳ ಸಕ್ಕರೆಯಿಂದ ಕೂಡಿರುವುದರಿಂದ ದೇಹಕ್ಕೆ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ.