ಸುಮ್ಮನೆ ಹೇಳಲ್ಲ 'ಕಿಂಗ್ ಕೊಹ್ಲಿ' ಅಂತ! ವಿಜಯ್​ ಹಜಾರೆ ಟ್ರೋಫಿಯಲ್ಲಿ ಒಂದೇ 1 ರನ್ ಬಾರಿಸಿದ್ರೆ...​

ಟೀಮ್ ಇಂಡಿಯಾದ 'ರನ್ ಮೆಷಿನ್'
ಟೀಮ್ ಇಂಡಿಯಾದ 'ರನ್ ಮೆಷಿನ್'
Published on
virat kohli

ಟೀಮ್ ಇಂಡಿಯಾದ 'ರನ್ ಮೆಷಿನ್'

ಟೀಮ್ ಇಂಡಿಯಾದ 'ರನ್ ಮೆಷಿನ್', ದಾಖಲೆಗಳ ಸರದಾರ, ಕ್ರಿಕೆಟ್​ ಅಭಿಮಾನಿಗಳ ನೆಚ್ಚಿನ 'ಕಿಂಗ್' ವಿರಾಟ್​ ಕೊಹ್ಲಿ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಈಗಾಗಲೇ ತಮ್ಮ ಹೆಸರನ್ನು ಮುದ್ರಿಸಿರುವ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ಫಾರ್ಮೆಟ್​ನಲ್ಲಿಯೂ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ
virat kohli

ರನ್​ ಹೊಳೆ

ಒಮ್ಮೆ ತಂಡದ ಪರ ಕ್ರೀಸ್​ಗಿಳಿದರೆ, ಅವರನ್ನು ಮತ್ತು ಅವರ ಬ್ಯಾಟ್​ನಿಂದ ಹರಿಯುವ ರನ್​ ಹೊಳೆಯನ್ನು ತಡೆಯುವುದು ಸುಲಭದ ಮಾತೇ ಅಲ್ಲ. ಟಿ20, ಏಕದಿನ ಮತ್ತು ಟೆಸ್ಟ್​ನಲ್ಲಿ ಅಬ್ಬರಿಸಿರುವ ಕೊಹ್ಲಿ, ಇದೀಗ ವಿಜಯ್ ಹಜಾರೆ ಟೂರ್ನಿಯಲ್ಲಿ ಮತ್ತೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.
virat kohli

ದಾಖಲೆಗಳ 'ಕಿಂಗ್​'

ಹನ್ನೊಂದು ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಸಜ್ಜಾಗಿರುವ ವಿರಾಟ್​, ತಮ್ಮದೇ ತಂಡವಾದ ದೆಹಲಿ ಪರವಾಗಿ ಬಿರುಸಿನ ಬ್ಯಾಟಿಂಗ್ ನಡೆಸಲು ಎದುರುನೋಡುತ್ತಿದ್ದಾರೆ. ಇನ್ನು ದೆಹಲಿ ತಂಡವನ್ನು ರಿಷಭ್ ಪಂತ್ ನಾಯಕರಾಗಿ ಮುನ್ನಡೆಸಲಿದ್ದಾರೆ.
virat kohli

ಅಪರೂಪದ ದಾಖಲೆಯತ್ತ ಕೊಹ್ಲಿ...

ಏಕದಿನ ಕ್ರಿಕೆಟ್​ನಲ್ಲಿ, ಕೊಹ್ಲಿ ಇದುವರೆಗೆ 308 ಪಂದ್ಯಗಳನ್ನಾಡಿದ್ದು, 14,557 ರನ್ ಗಳಿಸಿದ್ದಾರೆ. ಇವುಗಳನ್ನು ಸೇರಿಸಿದರೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ ಒಟ್ಟು ರನ್‌ (ಏಕದಿನ, ವಿಜಯ್ ಹಜಾರೆ ಟ್ರೋಫಿ, ಭಾರತ ಎ ಮತ್ತು ವಲಯ ತಂಡಗಳಲ್ಲಿ ಗಳಿಸಿದ ರನ್‌ಗಳು ಸೇರಿ) 15,999ಕ್ಕೆ ತಲುಪಿದೆ. ಆಂಧ್ರ ವಿರುದ್ಧದ ಪಂದ್ಯದಲ್ಲಿ ಒಂದೇ 1 ರನ್​ ಗಳಿಸಿದ್ರೆ ದಾಖಲೆ
virat kohli

ಸಚಿನ್ ತೆಂಡೂಲ್ಕರ್ ಬಳಿಕ ವಿರಾಟ್​...

ಈ ಪಟ್ಟಿಯಲ್ಲಿ, ಕೊಹ್ಲಿಗಿಂತ ಮೊದಲು ಟೀಮ್ ಇಂಡಿಯಾ ದಂತಕಥೆ ಸಚಿನ್ ತೆಂಡೂಲ್ಕರ್ ಇದ್ದಾರೆ. ಮಾಸ್ಟರ್​ಬ್ಲಾಸ್ಟರ್​ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಒಟ್ಟು 21,999 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಆಟಗಾರ ಗ್ರಹಾಂ ಗೂಚ್ ಪಟ್ಟಿಯಲ್ಲಿ 22,211 ರನ್ ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
virat kohli

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯರು

1. ಸಚಿನ್ ತೆಂಡೂಲ್ಕರ್ - 538 ಇನ್ನಿಂಗ್ಸ್‌, 21,999 ರನ್‌ 2. ವಿರಾಟ್ ಕೊಹ್ಲಿ - 329 ಇನ್ನಿಂಗ್ಸ್‌, 15,999 ರನ್‌ 3. ಸೌರವ್ ಗಂಗೂಲಿ - 421 ಇನ್ನಿಂಗ್ಸ್‌, 15,622 ರನ್‌ 4. ರೋಹಿತ್ ಶರ್ಮ - 338 ಇನ್ನಿಂಗ್ಸ್‌, 13,758 ರನ್‌ 5. ಶಿಖರ್ ಧವನ್ - 298 ಇನ್ನಿಂಗ್ಸ್‌, 12,074 ರನ್‌
virat kohli

ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರು

1. ಗ್ರಹಾಂ ಗೂಚ್ - 22,211 ರನ್‌ 2. ಗ್ರೇಮ್ ಹಿಕ್ - 22,059 ರನ್‌ 3. ಸಚಿನ್ ತೆಂಡೂಲ್ಕರ್ - 21,999 ರನ್‌ 4. ಕುಮಾರ್ ಸಂಗಕ್ಕಾರ - 19,456 ರನ್‌ 5. ವಿವ್ ರಿಚರ್ಡ್ಸ್ - 16,995 ರನ್‌
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net