ಸಕ್ಕರೆ ವ್ಯಸನದಿಂದ ಮುಕ್ತಿ ಪಡೆಯಲು ಈ 5 ಪದಾರ್ಥಗಳನ್ನು ಟ್ರೈ ಮಾಡಿ
ಸಕ್ಕರೆ ಪದಾರ್ಥಗಳನ್ನು ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಆದರೆ, ಕೆಲವು ನೈಸರ್ಗಿಕ ಆಹಾರಗಳು ಈ ಹಂಬಲವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.
ಬೆರ್ರಿ ಹಣ್ಣುಗಳು
ಸ್ಟ್ರಾಬೆರಿ, ಬ್ಲೂಬೆರಿ ಅಥವಾ ರಾಸ್ಪ್‌ಬೆರಿಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ ಮತ್ತು ಸಕ್ಕರೆ ಅಂಶ ಕಡಿಮೆಯಿರುತ್ತದೆ. ಇವು ಸಿಹಿಯಾಗಿದ್ದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದಿಲ್ಲ. ಇವುಗಳಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಡ್ರೈಫ್ರ್ಯೂಟ್ಸ್
ಬಾದಾಮಿ, ಅಕ್ರೋಟ್ ,ಚಿಯಾ ಬೀಜಗಳು ಅಥವಾ ಫ್ಲಾಕ್ಸ್ ಬೀಡ್ಸ್ ಸೇವಿಸುವುದು ಉತ್ತಮ. ಇವುಗಳಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಇರುತ್ತದೆ. ಇದು ಹಸಿವನ್ನು ನಿಯಂತ್ರಿಸಿ ಸಕ್ಕರೆಯ ಬಯಕೆಯನ್ನು ತಡೆಯುತ್ತದೆ.
ಸಿಹಿ ಗೆಣಸು
ನಿಮಗೆ ವಿಪರೀತ ಸಿಹಿ ತಿನ್ನಬೇಕೆನಿಸಿದಾಗ ಬೇಯಿಸಿದ ಸಿಹಿ ಗೆಣಸು ಉತ್ತಮ ಆಯ್ಕೆ. ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ನಾರಿನಂಶ ಹೆಚ್ಚಿರುತ್ತದೆ. ಇದು ದೇಹಕ್ಕೆ ಬೇಕಾದ ನೈಸರ್ಗಿಕ ಸಿಹಿಯನ್ನು ನೀಡುವ ಮೂಲಕ ಸಕ್ಕರೆ ತಿನ್ನುವ ಹಂಬಲವನ್ನು ನೈಸರ್ಗಿಕವಾಗಿಯೇ ಕಡಿಮೆ ಮಾಡುತ್ತದೆ.
ದಾಲ್ಚಿನ್ನಿ
ದಾಲ್ಚಿನ್ನಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಕಾಫಿ, ಟೀ ಅಥವಾ ಓಟ್ಸ್ ಮೇಲೆ ಸ್ವಲ್ಪ ದಾಲ್ಚಿನ್ನಿ ಪುಡಿ ಉದುರಿಸುವುದರಿಂದ ಅದು ಆಹಾರಕ್ಕೆ ನೈಸರ್ಗಿಕ ಸಿಹಿ ನೀಡುತ್ತದೆ ಮತ್ತು ಪದೇ ಪದೇ ಸಕ್ಕರೆ ತಿನ್ನಬೇಕೆಂಬ ಬಯಕೆಯನ್ನು ಹತ್ತಿಕ್ಕುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News