ಈ 5 ಸಿಂಪಲ್ ಹೇರ್‌ಸ್ಟೈಲ್‌ಗಳು ನಿಮ್ಮ ಲುಕ್‌ನ್ನೇ ಬದಲಾಯಿಸುತ್ತವೆ: ಇದನ್ನೊಮ್ಮೆ ಟ್ರೈ ಮಾಡಿ ನೋಡಿ... Hairstyles

ಪ್ರತಿದಿನ ಒಂದೇ ರೀತಿಯ ಹೇರ್‌ಸ್ಟೈಲ್ ಮಾಡಿ ಬೇಸರವಾಗಿದೆಯೇ? ಕೂದಲಿಗೆ ಹೆಚ್ಚು ಸಮಯ ನೀಡದೇ ನಿಮ್ಮ ಲುಕ್‌ಗೆ ಹೊಸತನ ನೀಡಬಹುದು. ಕಾಲೇಜು, ಆಫೀಸ್ ಅಥವಾ ಸಣ್ಣ ಕಾರ್ಯಕ್ರಮ...ಯಾವುದೇ ಸಂದರ್ಭಕ್ಕೂ ಹೊಂದುವ ಈ 5 ಸರಳ ಹೇರ್‌ಸ್ಟೈಲ್‌ಗಳು ನಿಮ್ಮ ಒಟ್ಟಾರೆ ಲುಕ್‌ನ್ನೇ ಬದಲಾಯಿಸಬಹುದು.
Hairstyles
ಕೇಶವಿನ್ಯಾಸ
Published on: 

ಲೋ ಪೋನಿಟೇಲ್

ಕೂದಲನ್ನು ಸರಿಯಾಗಿ ಬಾಚಿ ಕತ್ತಿನ ಕೆಳಭಾಗದಲ್ಲಿ ಪೋನಿಟೇಲ್ ಕಟ್ಟಿಕೊಳ್ಳಿ. ಮುಂದೆ ಕೆಲವು ಕೂದಲಿನ ಎಳೆಗಳನ್ನು ಸಡಿಲವಾಗಿ ಬಿಟ್ಟರೆ ಇನ್ನಷ್ಟು ಸಹಜ ಹಾಗೂ ಸ್ಟೈಲಿಶ್ ಲುಕ್ ಸಿಗುತ್ತದೆ. ಸಿಂಪಲ್ ಕುರ್ತಾ ಅಥವಾ ಸೀರೆಯ ಜತೆಯಲ್ಲೂ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಮೆಸ್ಸಿ ಬನ್

ತುಂಬಾ ಅಚ್ಚುಕಟ್ಟಾಗಿ ಮಾಡಬೇಕಿಲ್ಲ. ಕೂದಲನ್ನು ಹಿಂದಕ್ಕೆ ತೆಗೆದುಕೊಂಡು ಸಡಿಲವಾಗಿ ಬನ್ ಕಟ್ಟಿಕೊಳ್ಳಿ. ಮುಖದ ಎರಡೂ ಬದಿಯಲ್ಲಿ ಕೆಲವು ಕೂದಲಿನ ಎಳೆಗಳನ್ನು ಬಿಡುವುದರಿಂದ ಸರಳವಾಗಿಯೇ ಆಕರ್ಷಕ ಲುಕ್ ಸಿಗುತ್ತದೆ. ಸಣ್ಣ ಕಿವಿಯೋಲೆ ಅಥವಾ ಜುಮ್ಕಾ ಜೊತೆ ಈ ಸ್ಟೈಲ್ ಇನ್ನಷ್ಟು ಸುಂದರವಾಗಿ ಕಾಣುತ್ತದೆ

ಹಾಫ್ ಅಪ್ ಹೇರ್‌ಸ್ಟೈಲ್

ಮುಂಭಾಗದ ಕೂದಲಿನ ಒಂದು ಭಾಗವನ್ನು ತೆಗೆದುಕೊಂಡು ಹಿಂದಕ್ಕೆ ಕ್ಲಿಪ್ ಮಾಡಿ, ಉಳಿದ ಕೂದಲನ್ನು ಹಾಗೆಯೇ ಬಿಡಿ. ಕೂದಲಿನ ಉದ್ದವನ್ನು ತೋರಿಸುವ ಈ ಸ್ಟೈಲ್ ದಿನನಿತ್ಯದ ಬಳಕೆಗೆ ಸೂಕ್ತವಾಗಿದ್ದು, ಫೋಟೋಗಳಲ್ಲೂ ಚೆನ್ನಾಗಿ ಕಾಣುತ್ತದೆ.

ಸೈಡ್ ಬ್ರೇಡ್

ಕೂದಲನ್ನು ಒಂದು ಬದಿಗೆ ತೆಗೆದುಕೊಂಡು ಸರಳವಾಗಿ ಜಡೆ ಹಾಕಿ. ಜಡೆಯನ್ನು ಸ್ವಲ್ಪ ಸಡಿಲವಾಗಿ ಮಾಡಿದರೆ ಹೆಚ್ಚು ನೈಸರ್ಗಿಕ ಹಾಗೂ ಸುಂದರವಾದ ಲುಕ್ ಸಿಗುತ್ತದೆ. ಸಾಂಪ್ರದಾಯಿಕ ಉಡುಪುಗಳ ಜೊತೆಗೆ ಈ ಹೇರ್‌ಸ್ಟೈಲ್ ವಿಶೇಷವಾಗಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕಾಲೇಜು ಹುಡುಗಿಯರಿಗೆ ಇದು ತುಂಬಾ ಉಪಯುಕ್ತ.

ಕ್ಲಾಸಿಕ್ ಹೈ ಪೋನಿಟೇಲ್

ಕೂದಲನ್ನು ಮೇಲಕ್ಕೆ ತೆಗೆದುಕೊಂಡು ಚೆನ್ನಾಗಿ ಬಿಗಿಯಾಗಿ ಪೋನಿಟೇಲ್ ಕಟ್ಟಿಕೊಳ್ಳಿ. ಇದು ಮುಖಕ್ಕೆ ಸ್ಪಷ್ಟವಾದ ಲುಕ್ ನೀಡುವುದರ ಜೊತೆಗೆ ಸರಳ ಉಡುಪಿಗೂ ಸ್ಟೈಲಿಶ್ ಟಚ್ ನೀಡುತ್ತದೆ. ಕಾಲೇಜು ಅಥವಾ ಹೊರಗೆ ಹೋಗುವಾಗ ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬಹುದಾದ ಸುಲಭ ಹೇರ್‌ಸ್ಟೈಲ್ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net