ದೇಹದಲ್ಲಿ ಉಂಟಾಗುವ ಉರಿಯೂತವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಮಸಾಲೆಗಳು ಉತ್ತಮ ಸಹಾಯಕವಾಗಿವೆ. ಇವುಗಳನ್ನು ಪ್ರತಿನಿತ್ಯ ಆಹಾರದಲ್ಲಿ ಬಳಸುವುದರಿಂದ ಉರಿಯೂತವನ್ನು ನಿವಾರಿಸಿಕೊಳ್ಳಬಹುದು.
ಅರಿಶಿನ
ಅರಿಶಿನದಲ್ಲಿ ಕರ್ಕ್ಯೂಮಿನ್ ಎಂಬ ಸಂಯುಕ್ತವು ಬಲವಾದ ಉರಿಯೂತ ನಿವಾರಕ ಗುಣ ಹೊಂದಿದ್ದು, ಇದು ಆರ್ಥರೈಟಿಸ್ ನೋವು ಕಡಿಮೆ ಮಾಡಿ, ದೇಹದ ಉರಿಯೂತವನ್ನು ತಗ್ಗಿಸುತ್ತದೆ.
ಶುಂಠಿ
ಶುಂಠಿಯಲ್ಲಿ ಜಿಂಜರಾಲ್ ಮತ್ತು ಶೋಗಾಲ್ ಎಂಬ ಸಂಯುಕ್ತಗಳನ್ನು ಹೊಂದಿದ್ದು, ಇದು ಉರಿಯೂತದ ಮಾರ್ಗಗಳನ್ನು ತಡೆಯುತ್ತವೆ. ಇದರಿಂದ ಸ್ನಾಯು ನೋವು, ಆರ್ಥರೈಟಿಸ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಉತ್ತಮವಾಗಬಹುದು.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವು ಉರಿಯೂತ ಮಾರ್ಕರ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚಕ್ಕೆ
ಚಕ್ಕೆಯಲ್ಲಿ ಸಿನಾಮಾಲ್ಡಿಹೈಡ್ ಎಂಬ ಅಂಶವು ಆಂಟಿ-ಇನ್ಫ್ಲಮೇಟರಿ ಗುಣಗಳನ್ನು ಹೊಂದಿದ್ದು, ರಕ್ತದೊತ್ತಡ ಮತ್ತು ಉರಿಯೂತವನ್ನು ನಿಯಂತ್ರಿಸುತ್ತದೆ.
ಲವಂಗ
ಲವಂಗದಲ್ಲಿ ಯೂಜೆನಾಲ್ ಎಂಬ ಸಂಯುಕ್ತವು ಬಲವಾದ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ.