ಗೋಲ್ಡನ್ ರಿಟ್ರೈವರ್ (Golden Retriever)
ಇವು ಜಗತ್ತಿನಲ್ಲೇ ಅತ್ಯಂತ ಸ್ನೇಹಪರ ನಾಯಿಗಳೆಂದು ಹೆಸರುವಾಸಿ. ಇವು ಮಕ್ಕಳೊಂದಿಗೆ ಬಹಳ ತಾಳ್ಮೆಯಿಂದ ಇರುತ್ತವೆ ಮತ್ತು ಅಪರಿಚಿತರೊಂದಿಗೂ ಬೇಗನೆ ಗೆಳೆತನ ಬೆಳೆಸುತ್ತವೆ. ಇವುಗಳ ಬುದ್ಧಿವಂತಿಕೆ ಮತ್ತು ಶಾಂತ ಸ್ವಭಾವ ಇವುಗಳನ್ನು ಫ್ಯಾಮಿಲಿ ಡಾಗ್ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿರಿಸುತ್ತದೆ.