ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಜಾಗದಲ್ಲೀಗ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿರುವುದು ಸದ್ಯ ಸ್ಥಳೀಯರ ಕುತೂಹಲ ಕೆರಳಿಸಿದೆ. ದಿನಕ್ಕೊಂದು ಪುರಾತನದ್ದು ಎಂದೇಳುವ ವಸ್ತುಗಳು ಲಭಿಸುತ್ತಿರುವುದು ನಾನಾ ಗೊಂದಲ ಮತ್ತು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.
ಪ್ರಾಚೀನ ಕಾಲದ ಅವಶೇಷ
ಬಡ ಕುಟುಂಬ ತೋರಿದ ಜಾಗವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವ ಪುರಾತತ್ವ ಇಲಾಖೆ, ಅಲ್ಲಿಂದ ಶೋಧ ಕಾರ್ಯ ಆರಂಭಿಸಿ, ಇಂದು ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿವಲಿಂಗ, ಪ್ರಾಚೀನ ಕಾಲದ ಅವಶೇಷ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ
ಪತ್ತೆ ಆಗಿದ್ಹೇಗೆ?
ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬ ಮಹಿಳೆ ಮನೆ ಕಟ್ಟಿಸುವ ಆಸೆಯನ್ನು ಹೊತ್ತಿದ್ದರು. ಈ ಹಿನ್ನೆಲೆ ತಮ್ಮ ಜಾಗದಲ್ಲಿ ಅಡಿಪಾಯಕ್ಕೆ ಗುಂಡಿ ಅಗೆಯುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರ ಪುಟ್ಟ ಮಗನಿಗೆ ತಾಮ್ರದ ತಂಬಿಗೆಯಲ್ಲಿ ಪುರಾತನದ ವಸ್ತುಗಳು ಸಿಕ್ಕಿತು.
ಇಲ್ಲಿಯವರೆಗೆ ಏನೆಲ್ಲ ಸಿಕ್ಕಿವೆ?
ಆರಂಭದಲ್ಲಿ ಎರಡು ನೀಲಮಣಿ, ಎರಡು ಮಾಣಿಕ್ಯ ಮತ್ತು ಒಂದು ಹವಳದ ಜತೆ ಒಂದು ಮುತ್ತು ದೊರೆಯಿತು. ಚಿನ್ನಾಭರಣದ ಮೌಲ್ಯದಷ್ಟೇ ನೀಲಮಣಿ ಮುತ್ತು-ಹವಳ ಮಾಣಿಕ್ಯದ ಮೌಲ್ಯವು ಇನ್ನೂ ಅಧಿಕವಾಗಲಿದೆ ಎಂದು ತಿಳಿದುಬಂದಿತು.
ಉತ್ಖನನದ 2ನೇ ದಿನ: 2ನೇ ದಿನದ ಉತ್ಖನನದ ವೇಳೆ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪ್ರಾಚೀನ ಕಾಲದ ಅವಶೇಷವೊಂದು ಪತ್ತೆಯಾಯಿತು.
ಉತ್ಖನನದ 3, 4ನೇ ದಿನ ಸಿಕ್ಕಿದ್ದೇನು?
ಉತ್ಖನನದ 3ನೇ ದಿನ: ಈ ದಿನದ ಉತ್ಖನನ ವೇಳೆ ಸ್ಥಳದ ಕೋಟೆಯ ಗೋಡೆಯಲ್ಲಿ ಶಿವಲಿಂಗ ಸಿಕ್ಕಿತು. ಇದು ಹಿತ್ತಾಳೆ, ಕಂಚು, ತಾಮ್ರ ಅಥವಾ ಬೆಳ್ಳಿಯದ್ದಾ? ಎಂಬ ಕುತೂಹಲ ಮೂಡಿತು.
ಉತ್ಖನನದ 4ನೇ ದಿನ: ಈ ದಿನದಂದು ಕಂಬದ ಗೋದಿ, ಲೋಹದ ಗಂಟೆ, ಕಲ್ಲಿನ ಕೊಡಲಿ ಪತ್ತೆಯಾಗಿವೆ.