ಕಪ್ಪು ಚುಕ್ಕೆಗಳನ್ನು ಹೋಗಲಾಡಿಸಲು ಇದುವೇ ಬೆಸ್ಟ್ ದಾರಿ! Dark Spots

ಕಪ್ಪು ಚುಕ್ಕೆಗಳು
ಕಪ್ಪು ಚುಕ್ಕೆಗಳು
Published on: 
Dark Spots

ಕಪ್ಪು ಚುಕ್ಕೆಗಳು

ಚರ್ಮದಲ್ಲಿ ಮೆಲನಿನ್ ವರ್ಣದ್ರವ್ಯ ಅತಿಯಾಗಿ ಉತ್ಪತ್ತಿಯಾದಾಗ ಕಪ್ಪು ಚುಕ್ಕೆಗಳು ಮೂಡುತ್ತವೆ. ಇದಕ್ಕೆ ಸೂರ್ಯನ ಹಾನಿಕಾರಕ ಕಿರಣಗಳು, ಹಾರ್ಮೋನ್ ಏರುಪೇರು, ಮೊಡವೆಗಳನ್ನು ಚಿವುಟುವುದು ಮತ್ತು ವಯಸ್ಸಾಗುವಿಕೆ ಪ್ರಮುಖ ಕಾರಣಗಳಾಗಿವೆ.
Dark Spots

ನಿಂಬೆ ರಸ ಮತ್ತು ಜೇನುತುಪ್ಪ

ನಿಂಬೆ ರಸವು ನೈಸರ್ಗಿಕ ಬ್ಲೀಚಿಂಗ್ ಗುಣವನ್ನು ಹೊಂದಿದೆ, ಇದು ಕಪ್ಪು ಚುಕ್ಕೆಗಳನ್ನು ತಿಳಿಯಾಗಿಸಲು ಸಹಾಯ ಮಾಡುತ್ತದೆ. ಒಂದು ಚಮಚ ನಿಂಬೆ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕಪ್ಪು ಚುಕ್ಕೆಗಳಿರುವ ಜಾಗಕ್ಕೆ ಹಚ್ಚಿ. 10-15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
Dark Spots

ಆಲೂಗಡ್ಡೆ ರಸ

ಆಲೂಗಡ್ಡೆಯಲ್ಲಿರುವ 'ಕ್ಯಾಟೆಕೋಲೇಸ್' ಎಂಬ ಕಿಣ್ವವು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಆಲೂಗಡ್ಡೆ ರಸವನ್ನು ತೆಗೆದುಕೊಂಡು ಕಪ್ಪು ಚುಕ್ಕೆಗಳ ಮೇಲೆ ಮಸಾಜ್ ಮಾಡಿ. 20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.
Dark Spots

ಅಲೋವೆರಾ ಜೆಲ್

ಅಲೋವೆರಾ ಚರ್ಮಕ್ಕೆ ತಂಪು ನೀಡುವುದಲ್ಲದೆ, ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ತಾಜಾ ಅಲೋವೆರಾ ಜೆಲ್ ಅನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ತೊಳೆಯಿರಿ.
Dark Spots

ಮೊಸರು ಮತ್ತು ಕಡಲೆ ಹಿಟ್ಟು

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಎರಡು ಚಮಚ ಮೊಸರಿಗೆ ಒಂದು ಚಮಚ ಕಡಲೆ ಹಿಟ್ಟು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ.
Dark Spots

ಪಪ್ಪಾಯಿ ಹಣ್ಣಿನ ಪೇಸ್ಟ್

ಪಪ್ಪಾಯಿಯಲ್ಲಿರುವ 'ಪಪೈನ್' ಎಂಬ ಕಿಣ್ವವು ಕಪ್ಪು ಕಲೆಗಳನ್ನು ಹೋಗಲಾಡಿಸಿ ಚರ್ಮಕ್ಕೆ ಹೊಳಪು ನೀಡುತ್ತದೆ. ಚೆನ್ನಾಗಿ ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನಂತರ ತೊಳೆಯಿರಿ.