ಮೈ ಕೊರೆಯುವ ಚಳಿಗಾಲದಲ್ಲಿ ನಿಮ್ಮ ಮಕ್ಕಳ ಆರೈಕೆ ಹೀಗಿರಲಿ... Winter Season

ಚಳಿಗಾಲದಲ್ಲಿ ಮಕ್ಕಳ ಆರೈಕೆ
ಚಳಿಗಾಲದಲ್ಲಿ ಮಕ್ಕಳ ಆರೈಕೆ
Published on
Winter Season

ಚಳಿಗಾಲದಲ್ಲಿ ಮಕ್ಕಳ ಆರೈಕೆ

ಚಳಿಗಾಲದಲ್ಲಿ ತಂಪಾದ ಗಾಳಿ ಮತ್ತು ಬದಲಾಗುವ ಹವಾಮಾನದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಬೇಗನೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಕೆಲವೊಂದನ್ನು ಕ್ರಮಗಳನ್ನು ಪಾಲಿಸಬೇಕು. ಅವುಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
Winter Season

ಬೆಚ್ಚಗಿನ ಉಡುಪು

ಮಕ್ಕಳಿಗೆ ಒಂದೇ ದಪ್ಪನೆಯ ಸ್ವೆಟರ್ ಹಾಕುವ ಬದಲು, ಪದರ ಪದರವಾಗಿ ಬಟ್ಟೆಗಳನ್ನು ಹಾಕಿ. ಒಳಗೆ ಹತ್ತಿ ಬಟ್ಟೆ ಇರಲಿ, ಅದರ ಮೇಲೆ ಉಣ್ಣೆಯ ಬಟ್ಟೆ ಧರಿಸಿ. ಇದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ. ಕಿವಿ ಮತ್ತು ತಲೆ ಮುಚ್ಚಲು ಮೃದುವಾದ ಟೋಪಿ ಬಳಸಿ.
Winter Season

ಚರ್ಮದ ಆರೈಕೆ

ಚಳಿಗಾಲದಲ್ಲಿ ಮಕ್ಕಳ ಚರ್ಮ ಬೇಗನೆ ಒಣಗುತ್ತದೆ. ಆದ್ದರಿಂದ ಸ್ನಾನದ ನಂತರ ಮತ್ತು ಮಲಗುವ ಮುನ್ನ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್, ಬೇಬಿ ಲೋಷನ್ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿ. ಇದು ಚರ್ಮದ ಮೃದುತ್ವವನ್ನು ಕಾಪಾಡುತ್ತದೆ.
Winter Season

ಉಗುರು ಬೆಚ್ಚಗಿನ ನೀರಿನ ಸ್ನಾನ

ಮಕ್ಕಳಿಗೆ ತೀರಾ ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡಿಸಬೇಡಿ ಇದು ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಬದಲಾಗಿ ಉಗುರು ಬೆಚ್ಚಗಿನ ನೀರನ್ನು ಬಳಸಿ. ಸ್ನಾನದ ಸಮಯ 5 ರಿಂದ 10 ನಿಮಿಷಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ.
Winter Season

ಪೌಷ್ಟಿಕ ಆಹಾರ ಮತ್ತು ನೀರಿನಾಂಶ

ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಸಿರು ತರಕಾರಿ, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ನೀಡಿ. ಚಳಿಗಾಲದಲ್ಲಿ ಮಕ್ಕಳು ನೀರು ಕುಡಿಯುವುದು ಕಡಿಮೆ, ಹಾಗಾಗಿ ಆಗಾಗ ಉಗುರು ಬೆಚ್ಚಗಿನ ನೀರು ಅಥವಾ ಸೂಪ್ ನೀಡುವ ಮೂಲಕ ಅವರ ದೇಹ ಹೈಡ್ರೇಟ್​ ಆಗಿ ಇರುವಂತೆ ನೋಡಿಕೊಳ್ಳಿ.
Winter Season

ಸೂರ್ಯನ ಬೆಳಕು

ಬೆಳಗಿನ ಎಳೆ ಬಿಸಿಲಿನಲ್ಲಿ ಮಗುವನ್ನು ಸ್ವಲ್ಪ ಹೊತ್ತು ಇರಿಸಿ. ಇದರಿಂದ ಮಗುವಿಗೆ ಬೇಕಾದ ವಿಟಮಿನ್ ಡಿ ದೊರೆಯುತ್ತದೆ ಮತ್ತು ದೇಹಕ್ಕೆ ನೈಸರ್ಗಿಕವಾಗಿ ಬೆಚ್ಚಗಿನ ಅನುಭವವಾಗುತ್ತದೆ.
Winter Season

ಎಣ್ಣೆ ಮಸಾಜ್

ದಿನವೂ ಸ್ನಾನ ಮಾಡುವ ಮುನ್ನ ಸಾಸಿವೆ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಮಗುವಿಗೆ ಮಸಾಜ್ ಮಾಡಿ. ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಒಳಗಿನಿಂದ ಶಾಖವನ್ನು ನೀಡುತ್ತದೆ.
Winter Season

ಮನೆಯ ಸ್ವಚ್ಛತೆ ಮತ್ತು ಗಾಳಿ

ಮನೆಯೊಳಗೆ ಶುದ್ಧ ಗಾಳಿ ಇರುವಂತೆ ನೋಡಿಕೊಳ್ಳಿ. ಕಿಟಕಿಗಳನ್ನು ಪೂರ್ತಿ ಮುಚ್ಚಬೇಡಿ. ಧೂಳು ಅಥವಾ ಅಲರ್ಜಿ ಉಂಟುಮಾಡುವ ವಸ್ತುಗಳಿಂದ ಮಗುವನ್ನು ದೂರವಿಡಿ, ಇದು ನೆಗಡಿ ಮತ್ತು ಕೆಮ್ಮನ್ನು ತಡೆಯಲು ಸಹಕಾರಿ.
Winter Season

ಸೋಂಕುಗಳಿಂದ ರಕ್ಷಣೆ

ಚಳಿಗಾಲದಲ್ಲಿ ವೈರಲ್ ಜ್ವರ ಹರಡುವುದು ಹೆಚ್ಚು. ಆದ್ದರಿಂದ ಮನೆಯಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು ಇದ್ದರೆ ಅವರಿಂದ ಮಗುವನ್ನು ದೂರವಿರಿಸಿ. ಮಗುವಿಗೆ ಆಗಾಗ ಕೈಗಳನ್ನು ತೊಳೆದುಕೊಳ್ಳುವ ಅಭ್ಯಾಸ ಮಾಡಿಸಿ.
Winter Season

ಗಮನಿಸಿ

ಈ ಮೇಲಿನ ಕ್ರಮಗಳು ನಿಮ್ಮ ಮಗುವನ್ನು ಚಳಿಗಾಲದ ಕಾಯಿಲೆಗಳಿಂದ ದೂರವಿಡಲು ಸಹಾಯ ಮಾಡುತ್ತವೆ. ಆರೋಗ್ಯ ಆಹಾರವನ್ನು ನೀಡುವುದರೊಂದಿಗೆ ನಿಮ್ಮ ಮಕ್ಕಳನ್ನು ಆದಷ್ಟು ಜಂಕ್​ ಫುಡ್​ಗಳಿಂದ ದೂರವಿಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net