ಪೋಷಕಾಂಶಗಳ ಗಣಿದ್ರಾಕ್ಷಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಫೈಬರ್ ಹೇರಳವಾಗಿದೆ. ಇದು ದೇಹಕ್ಕೆ ಅಗತ್ಯವಾದ ಆಂಟಿಆಕ್ಸಿಡೆಂಟ್ಗಳನ್ನು ಒದಗಿಸುತ್ತದೆ..ಹೃದಯದ ಆರೋಗ್ಯಕ್ಕೆ ಬೆಸ್ಟ್ದ್ರಾಕ್ಷಿಯಲ್ಲಿರುವ ಪೊಟ್ಯಾಸಿಯಮ್ ಮತ್ತು ಪಾಲಿಫಿನಾಲ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ..ರೋಗನಿರೋಧಕ ಶಕ್ತಿ ಹೆಚ್ಚಳಇದರಲ್ಲಿರುವ ವಿಟಮಿನ್ ಸಿ ಅಂಶವು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಇದರಿಂದಾಗಿ ಆಗಾಗ ಬರುವ ಸೋಂಕುಗಳಿಂದ ದೂರವಿರಬಹುದು..ಚರ್ಮದ ಕಾಂತಿ ಹೆಚ್ಚಳದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೊಲ್ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಿ, ಮೊಡವೆಗಳ ವಿರುದ್ಧ ಹೋರಾಡುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.ಉತ್ತಮ ಜೀರ್ಣಕ್ರಿಯೆದ್ರಾಕ್ಷಿಯಲ್ಲಿರುವ ನಾರಿನಂಶ (Fiber) ಮತ್ತು ನೀರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.