ಕೇವಲ ಭಾರತದಲ್ಲಿ ಮಾತ್ರ ಕಾಣಸಿಗುವ ವಿಶಿಷ್ಟ ಜೀವಿಗಳಿವು | Unique Animals

ಏಷ್ಯಾಟಿಕ್ ಲಯನ್
ಏಷ್ಯಾಟಿಕ್ ಲಯನ್
Published on
These rare creatures are found only in India

ಏಷ್ಯಾಟಿಕ್ ಲಯನ್

ಈ ಪ್ರಾಣಿ ಗುಜರಾತ್‌ನ ಗಿರ್ ಅರಣ್ಯದಲ್ಲಿ ಕಂಡುಬರುತ್ತದೆ. ಇವು ಆಫ್ರಿಕನ್ ಸಿಂಹಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ.
These rare creatures are found only in India

ನೀಲಗಿರಿ ತಹ್ರ್

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು (ಕೇರಳ ಮತ್ತು ತಮಿಳುನಾಡು)ಕಂಡು ಬರುತ್ತದೆ. ಇದು ತಮಿಳುನಾಡಿನ ರಾಜ್ಯ ಪ್ರಾಣಿ. ಕಡಿದಾದ ಪರ್ವತಗಳ ಮೇಲೆ ಸುಲಭವಾಗಿ ಹತ್ತಬಲ್ಲ ವಿಶಿಷ್ಟ ಕಾಡು ಮೇಕೆ ಇದಾಗಿದೆ.
These rare creatures are found only in India

ಲಯನ್ ಟೇಲ್ಡ್ ಮಕಾಕ್

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳ ಮಳೆಕಾಡುಗಳಲ್ಲಿ ಕಂಡು ಬರುತ್ತದೆ. ಸಿಂಹದಂತಹ ಬಾಲ ಮತ್ತು ಮುಖದ ಸುತ್ತ ಬೆಳ್ಳನೆಯ ಕೇಸರವನ್ನು ಹೊಂದಿರುವ ಈ ಕೋತಿಗಳು ಜಗತ್ತಿನ ಅತ್ಯಂತ ಅಪರೂಪದ ಪ್ರೈಮೇಟ್ಸ್ ಜಾತಿಗೆ ಸೇರಿವೆ.
These rare creatures are found only in India

ಸಂಗೈ ಜಿಂಕೆ

ಮಣಿಪುರದ ಲೋಕ್ಟಾಕ್ ಸರೋವರ (ಕೈಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನವನ)ದಲ್ಲಿ ಕಂಡು ಬರುತ್ತದೆ. ಇದನ್ನು ದಾನ್ಸಿಂಗ್ ಡೀರ್ (ಕುಣಿಯುವ ಜಿಂಕೆ) ಎಂದು ಕರೆಯುತ್ತಾರೆ. ತೇಲುವ ಹುಲ್ಲಿನ ದ್ವೀಪಗಳ ಮೇಲೆ ಇವು ವಾಸಿಸುತ್ತವೆ.
These rare creatures are found only in India

ಹೂಲಾಕ್ ಗಿಬ್ಬನ್

ಈಶಾನ್ಯ ಭಾರತದ ರಾಜ್ಯಗಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಕಂಡುಬರುವ ಏಕೈಕ ಏಪ್ (ಬಾಲವಿಲ್ಲದ ಕೋತಿ) ಜಾತಿಗೆ ಸೇರಿದ ಪ್ರಾಣಿ ಇದಾಗಿದೆ. ಇವುಗಳ ಜೋರು ಧ್ವನಿ ಕಾಡಿನ ತುಂಬಾ ಪ್ರತಿಧ್ವನಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net