ಸದೃಢ ಮತ್ತು ಆರೋಗ್ಯಕರ ದೇಹವನ್ನು ಹೊಂದಲು ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಆರೋಗ್ಯಕರ ಕೊಬ್ಬು ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಗಳಿಂದ ಭರಿತ ಆಹಾರಗಳನ್ನು ಸೇವಿಸಿ. ಇದರ ಜೊತೆಗೆ ನಿಯಮಿತ ವ್ಯಾಯಾಮ ಅತ್ಯಗತ್ಯ.
ಮೊಟ್ಟೆಗಳು
ಪ್ರತಿ ಮೊಟ್ಟೆಯಲ್ಲಿ ಸುಮಾರು 6-7 ಗ್ರಾಂ ಪ್ರೋಟೀನ್ ಇದ್ದು, ಲ್ಯೂಸಿನ್‌ನಂತಹ ಅಮೈನೋ ಆಸಿಡ್‌ಗಳಿವೆ. ಇಡೀ ಮೊಟ್ಟೆ (ಹಳದಿ ಭಾಗ ಸಹ) ಸೇವಿಸಿ – ಇದು ಮಾಂಸಖಂಡಗಳನ್ನು ಬಲಪಡಿಸುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಿಸುತ್ತದೆ.
ಚಿಕನ್ ಬ್ರೆಸ್ಟ್
ಕಡಿಮೆ ಕೊಬ್ಬು ಮತ್ತು ಹೆಚ್ಚು ಪ್ರೋಟೀನ್ ಇದು ಮಾಂಸಖಂಡ ಬೆಳವಣಿಗೆಗೆ ಅತ್ಯುತ್ತಮ. ಗ್ರಿಲ್ ಅಥವಾ ಬೇಯಿಸಿ ಸೇವಿಸಿ.
ಸಾಲ್ಮನ್ ಮೀನು
ಒಮೆಗಾ-3 ಫ್ಯಾಟಿ ಆಸಿಡ್‌ಗಳು ಮತ್ತು ಉತ್ತಮ ಗುಣಮಟ್ಟದ ಪ್ರೋಟೀನ್ ಇದರಲ್ಲಿ ಸಮೃದ್ಧವಾಗಿವೆ. ಇದು ಉರಿಯೂತ ಕಡಿಮೆ ಮಾಡಿ, ಮಾಂಸಖಂಡಗಳ ಚೇತರಿಕೆಗೆ ಸಹಾಯ ಮಾಡುತ್ತದೆ.
ಮೊಸರು
ಹೆಚ್ಚಿನ ಪ್ರೋಟೀನ್ ಮತ್ತು ಪ್ರೊಬಯೋಟಿಕ್ಸ್ ಇದ್ದು ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಣ್ಣು ಅಥವಾ ಬೀಜಗಳೊಂದಿಗೆ ಸೇವಿಸಿ.
ವಾಲ್‌ನಟ್
ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ವಿಟಮಿನ್ E ಇದರಲ್ಲಿ ಇದ್ದು ದೇಹದ ಶಕ್ತಿ ಮತ್ತು ಮಾಂಸಖಂಡಗಳ ರಕ್ಷಣೆಗೆ ಉಪಯುಕ್ತ. ದಿನಕ್ಕೆ ಒಂದು ಮುಟ್ಟಿ ಸೇವಿಸಿ.