ಗರ್ಭಿಣಿಯರಲ್ಲಿ ಕೆಲವು ಲಕ್ಷಣಗಳು ಕಂಡುಬಂದರೆ ಅದು ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರು ಅಥವಾ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಬೇಕು.
ನಿರಂತರ ತಲೆನೋವು
ತಲೆನೋವು ಹೋಗದೇ ಇರುವುದು ಅಥವಾ ಹೆಚ್ಚಾಗುವುದು, ವಿಶೇಷವಾಗಿ ಕಣ್ಣು ಮಂದವಾಗುವಿಕೆ, ಫ್ಲ್ಯಾಷಿಂಗ್ ಲೈಟ್ಸ್ ಅಥವಾ ಸ್ಪಾಟ್ಸ್ ಕಾಣಿಸುತ್ತಿದ್ದರೆ ತಕ್ಷಣವೇ ಚಿಕಿತ್ಸೆ ಕೊಡಿಸಿಕೊಳ್ಳಬೇಕು.
ಯೋನಿ ರಕ್ತಸ್ರಾವ ಅಥವಾ ಹೆಚ್ಚಿನ ರಕ್ತಸ್ರಾವ
ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ರಕ್ತಸ್ರಾವ. ಇದು ಮಿಸ್ಕ್ಯಾರೇಜ್, ಪ್ಲಸೆಂಟಾ ಸಮಸ್ಯೆ ಅಥವಾ ಎಕ್ಟೋಪಿಕ್ ಪ್ರೆಗ್ನೆನ್ಸಿ ಸೂಚಿಸಬಹುದು. ತಕ್ಷಣ ಆಸ್ಪತ್ರೆಗೆ ಹೋಗಿ.
ತೀವ್ರ ಹೊಟ್ಟೆ ನೋವು
ತೀವ್ರವಾದ ಹೊಟ್ಟೆ ನೋವು ಇದು ಪ್ಲಸೆಂಟಾ ಅಬ್ರಪ್ಷನ್ ಅಥವಾ ಇತರ ಗಂಭೀರ ಸಮಸ್ಯೆಯ ಸೂಚನೆ ನಿರ್ಲಕ್ಷಿಸಬೇಡಿ.
ಉಸಿರಾಟದ ತೊಂದರೆ
ಉಸಿರು ಕಷ್ಟವಾಗುವುದು, ಎದೆ ನೋವು ಅಥವಾ ಹೃದಯ ವೇಗವಾಗಿ ಬಡಿಯುವುದು – ಇದು ರಕ್ತದ ಗಡ್ಡೆ, ಹೃದಯ ಸಂಬಂಧಿತ ಸಮಸ್ಯೆ ಅಥವಾ ಪ್ರೀ-ಎಕ್ಲಾಂಪ್ಸಿಯಾ ಸೂಚಿಸಬಹುದು.
ಗರ್ಭದಲ್ಲಿ ಮಗುವಿನ ಚಲನೆ ಕಡಿಮೆಯಾಗುವುದು
ಸಾಮಾನ್ಯವಾಗಿ 28 ವಾರಗಳ ನಂತರ ಮಗುವಿನ ಚಲನೆಗಳನ್ನು ಗಮನಿಸಿ. ಚಲನೆಗಳು ಗಣನೀಯವಾಗಿ ಕಡಿಮೆಯಾದರೆ ಅಥವಾ ನಿಲ್ಲಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಥವಾ ಆಸ್ಪತ್ರೆಗೆ ಹೋಗಿ. ಇದು ಮಗುವಿನ ಆರೋಗ್ಯಕ್ಕೆ ಅಪಾಯ ಸೂಚಿಸುತ್ತದೆ.