ಸುಸ್ತಿನ ಹಿಂದೆ ಅಡಗಿರಬಹುದು ಈ ಆರೋಗ್ಯ ಸಮಸ್ಯೆಗಳು! Feeling tired

ಸುಸ್ತಾಗುವುದು ಸಹಜ
ಸುಸ್ತಾಗುವುದು ಸಹಜ
Published on
Feeling tired

ಸುಸ್ತಾಗುವುದು ಸಹಜ

ದಿನವಿಡೀ ಕಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡಿದ ನಂತರ ಸುಸ್ತಾಗುವುದು ಸಹಜ. ಆದರೆ ಕೆಲವರು ಏನು ಕೆಲಸ ಮಾಡದೆಯೇ ದಿನವಿಡೀ ಸುಸ್ತು ಎಂದು ಮಲಗುವುದನ್ನು ನಾವು ಗಮನಿಸಿರುತ್ತೇವೆ. ಆದರೆ, ಈ ಚಟುವಟಿಕೆ ದೀರ್ಘಕಾಲದವರೆಗೂ ಮುಂದುವರೆದರೆ, ನಿಮ್ಮ ದೇಹವು ಸ್ಥಿರವಾಗಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
Feeling tired

ಕಳಪೆ ನಿದ್ರೆ

ಅನೇಕ ಜನರು ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದಿಲ್ಲ. ಕೇವಲ 5-6 ಗಂಟೆ ಮಾತ್ರ ನಿದ್ರಿಸುತ್ತಾರೆ. ಇದಲ್ಲದೆ, ಅನೇಕ ಜನರು ದೀರ್ಘಕಾಲ ನಿದ್ರಿಸುತ್ತಾರೆ. ಜೊತೆಗೆ ಗೊರಕೆಯನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಈ ಸಮಸ್ಯೆಯನ್ನು ಸ್ಲೀಪ್ ಅಪ್ನಿಯಾ ಎಂದು ಕರೆಯುತ್ತಾರೆ.
Feeling tired

ವಿಟಮಿನ್ ಕೊರತೆ

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೆಲಸದ ಒತ್ತಡ, ಕಳಪೆ ಜೀವನಶೈಲಿಯಿಂದಾಗಿ ಸರಿಯಾದ ಆಹಾರವನ್ನು ಸೇವಿಸುವುದಿಲ್ಲ. ಇದರಿಂದ ಅವರ ದೇಹದಲ್ಲಿ ವಿಟಮಿನ್​ಗಳ ಕೊರತೆ ಉಂಟಾಗಿರುತ್ತದೆ. ವಿಶೇಷವಾಗಿ ವಿಟಮಿನ್​ ಡಿ ಮತ್ತು ವಿಟಮಿನ್ ಬಿ 12 ಕೊರತೆ ಉಂಟಾದಾಗ ಸ್ನಾಯುಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
Feeling tired

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ

ರಕ್ತದಲ್ಲಿ ಸಕ್ಕರೆ ಹೆಚ್ಚಾಗಿ ಇದ್ದರೂ, ಇನ್ಸುಲಿನ್ ಕೊರತೆ ಅಥವಾ ಇನ್ಸುಲಿನ್ ಪ್ರತಿರೋಧದಿಂದಾಗಿ ಜೀವಕೋಶಗಳಿಗೆ ಆ ಗ್ಲೂಕೋಸ್ ಸರಿಯಾಗಿ ಶಕ್ತಿಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಯಾಸ, ಸುಸ್ತು, ದೌರ್ಬಲ್ಯಗಳು ಪ್ರಾರಂಭವಾಗುತ್ತದೆ.
Feeling tired

ಥೈರಾಯ್ಡ್ ಸಮಸ್ಯೆಗಳು

ಹಲವಾರು ಜನರಿಗೆ ಥೈರಾಯ್ಡ್​ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಂದರ್ಭಗಳಲ್ಲಿ ದೌರ್ಬಲ್ಯದಿಂದ ಕೋಶಗಳು ಶಕ್ತಿ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಸ್ನಾಯುಗಳು, ಮೆದುಳು ಮತ್ತು ಇತರ ಅಂಗಗಳು "ಇಂಧನ" ಪಡೆಯದೆ ದೌರ್ಬಲ್ಯ, ಆಯಾಸ ಮತ್ತು ನಿರಂತರ ತೂಕಡಿಕೆ ಉಂಟಾಗುತ್ತದೆ.
Feeling tired

ಖಿನ್ನತೆ

ಕೆಲವೊಂದಿಷ್ಟು ಜನರು ಏನಾದರೂ ಯೋಚನೆ ಮಾಡುತ್ತಲೇ ಇರುತ್ತಾರೆ. ಇದರಿಂದ ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ. ಇದು ನಿಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ. ಇದರಿಂದ ದಿನವಿಡೀ ಸುಸ್ತು, ಆಯಾಸ ಹೊಂದಲು ಕಾರಣವಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net