ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಯಿಂದ ದೂರವಿರಬೇಕೇ? ಹಾಗಾದ್ರೆ ಈ ಪಾನೀಯಗಳನ್ನು ತಪ್ಪದೇ ಕುಡಿಯಿರಿ...

ಚಳಿಗಾಲದ ಪಾನೀಯಗಳು
ಚಳಿಗಾಲದ ಪಾನೀಯಗಳು
Published on: 
Winter Season

ಚಳಿಗಾಲದ ಪಾನೀಯಗಳು

ಚಳಿಗಾಲದಲ್ಲಿ ದೇಹದ ಉಷ್ಣತೆ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಅದೇ ರೀತಿ ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳುವುದು ಮುಖ್ಯಾನೇ. ಈ ವಿಚಾರದಲ್ಲಿ ಕೆಲವು ಪಾನೀಯಗಳು ನಿಮಗೆ ತುಂಬಾ ಸಹಕಾರಿ ಆಗಲಿವೆ.
Winter Season

ಶುಂಠಿ ಚಹಾ

ಶುಂಠಿಯಲ್ಲಿ ಉರಿಯೂತ ವಿರೋಧಿ ಗುಣಗಳಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತದೆ. ನೆಗಡಿ ಮತ್ತು ಕೆಮ್ಮಿಗೆ ಇದು ರಾಮಬಾಣ.
Winter Season

ಅರಿಶಿನ ಹಾಲು

ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಮತ್ತು ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Winter Season

ಕಷಾಯ

ಧನಿಯಾ, ಜೀರಿಗೆ, ಕಾಳುಮೆಣಸು ಮತ್ತು ತುಳಸಿ ಎಲೆಗಳನ್ನು ಬಳಸಿ ತಯಾರಿಸಿದ ಕಷಾಯವು ಚಳಿಗಾಲದ ಶೀತ ಮತ್ತು ಗಂಟಲು ನೋವಿಗೆ ಅತ್ಯುತ್ತಮ ಮದ್ದು.
Winter Season

ಬಿಸಿ ಬಿಸಿ ಸೂಪ್

ತರಕಾರಿ ಅಥವಾ ಚಿಕನ್ ಸೂಪ್‌ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಲ್ಲದೆ, ದೇಹವನ್ನು ಹೈಡ್ರೇಟ್ ಆಗಿಡಲು ಮತ್ತು ಬೆಚ್ಚಗಿನ ಅನುಭವ ನೀಡಲು ಸಹಕಾರಿ.
Winter Season

ಮಸಾಲಾ ಚಹಾ

ಏಲಕ್ಕಿ, ಲವಂಗ, ದಾಲ್ಚಿನ್ನಿ ಮತ್ತು ಶುಂಠಿ ಸೇರಿಸಿದ ಮಸಾಲಾ ಚಹಾವು ಚಳಿಗಾಲದ ಆಲಸ್ಯವನ್ನು ದೂರ ಮಾಡಿ ಮನಸ್ಸಿಗೆ ಚೈತನ್ಯ ನೀಡುತ್ತದೆ.
Winter Season

ಬಿಸಿ ನಿಂಬೆ ನೀರು ಮತ್ತು ಜೇನುತುಪ್ಪ

ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ ಮತ್ತು ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ.
Winter Season

ಬಾದಾಮಿ ಹಾಲು

ಬಿಸಿ ಹಾಲಿನಲ್ಲಿ ಬಾದಾಮಿ ಪುಡಿ ಮತ್ತು ಕೇಸರಿ ಬೆರೆಸಿ ಕುಡಿಯುವುದು ಕೇವಲ ರುಚಿಕರವಲ್ಲದೆ, ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತದೆ.
Winter Season

ಗ್ರೀನ್ ಟೀ

ಇದರಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಚಳಿಗಾಲದಲ್ಲಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
Winter Season

ನಿಮಗಾಗಿ ಈ ಸಲಹೆ

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಾದರೂ, ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ಉಗುರುಬೆಚ್ಚಗಿನ ನೀರನ್ನು ಕುಡಿಯುವುದನ್ನು ಮರೆಯಬೇಡಿ.