ಆಂಟಿಬಯೋಟಿಕ್ಸ್ ಅತಿಯಾದ ಬಳಕೆಯಿಂದ ದೇಹಕ್ಕಾಗುವ ಭೀಕರ ಹಾನಿಗಳಿವು!

ಆಂಟಿಬಯೋಟಿಕ್ಸ್
ಆಂಟಿಬಯೋಟಿಕ್ಸ್
Published on
Antibiotics

ಆಂಟಿಬಯೋಟಿಕ್ಸ್

ಆಂಟಿಬಯೋಟಿಕ್ಸ್ ಬ್ಯಾಕ್ಟೀರಿಯಾಗಳಿಂದ ಬರುವ ಸೋಂಕುಗಳನ್ನು ಗುಣಪಡಿಸಲು ಇರುವ ಅತ್ಯಂತ ಪರಿಣಾಮಕಾರಿ ಔಷಧಿಗಳು ನಿಜ. ಆದರೆ, ವೈದ್ಯರ ಸಲಹೆ ಇಲ್ಲದೆ ಇವುಗಳನ್ನು ಅತಿಯಾಗಿ ಅಥವಾ ತಪ್ಪಾಗಿ ಬಳಸುವುದರಿಂದ ದೇಹದ ಮೇಲೆ ಗಂಭೀರವಾದ ಹಾನಿಗಳು ಉಂಟಾಗುತ್ತವೆ.
Antibiotics

ಆಂಟಿಬಯೋಟಿಕ್ ರೆಸಿಸ್ಟೆನ್ಸ್

ಪದೇ ಪದೇ ಇವುಗಳನ್ನು ಬಳಸುವುದರಿಂದ ದೇಹದಲ್ಲಿನ ಬ್ಯಾಕ್ಟೀರಿಯಾಗಳು ಪ್ರಬಲವಾಗಿ, ಔಷಧಿಗಳಿಗೆ ಒಗ್ಗಿಕೊಳ್ಳುತ್ತವೆ. ಪರಿಣಾಮವಾಗಿ, ಭವಿಷ್ಯದಲ್ಲಿ ಗಂಭೀರ ಕಾಯಿಲೆ ಬಂದಾಗ ಈ ಮಾತ್ರೆಗಳು ಕೆಲಸ ಮಾಡುವುದಿಲ್ಲ.
Antibiotics

ಒಳ್ಳೆಯ ಬ್ಯಾಕ್ಟೀರಿಯಾಗಳ ನಾಶ

ಆಂಟಿಬಯೋಟಿಕ್ಸ್ ದೇಹದ ಕೆಟ್ಟ ಬ್ಯಾಕ್ಟೀರಿಯಾಗಳ ಜೊತೆಗೆ ಜೀರ್ಣಕ್ರಿಯೆಗೆ ನೆರವಾಗುವ ಕರುಳಿನ 'ಒಳ್ಳೆಯ ಬ್ಯಾಕ್ಟೀರಿಯಾಗಳನ್ನು' ಕೊಲ್ಲುತ್ತವೆ. ಇದರಿಂದ ಭೇದಿ, ಗ್ಯಾಸ್ ಮತ್ತು ವಾಕರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
Antibiotics

ಅಲರ್ಜಿ ಸಮಸ್ಯೆಗಳು

ಕೆಲವರಿಗೆ ಆಂಟಿಬಯೋಟಿಕ್ಸ್ ತಿಂದ ತಕ್ಷಣ ಚರ್ಮದ ಮೇಲೆ ಕೆಂಪು ದದ್ದುಗಳು, ತುರಿಕೆ, ಮುಖ ಊದಿಕೊಳ್ಳುವುದು ಅಥವಾ ಉಸಿರಾಟದ ತೊಂದರೆಯಂತಹ ತೀವ್ರ ಅಲರ್ಜಿಗಳು ಉಂಟಾಗಬಹುದು.
Antibiotics

ಲಿವರ್ ಮತ್ತು ಕಿಡ್ನಿ ಮೇಲೆ ಒತ್ತಡ

ಪ್ರಬಲವಾದ ಆಂಟಿಬಯೋಟಿಕ್ಸ್‌ಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವ ಲಿವರ್ ಹಾಗೂ ಕಿಡ್ನಿಗಳ ಕಾರ್ಯಕ್ಷಮತೆಗೆ ಹಾನಿಯಾಗಬಹುದು.
Antibiotics

ರೋಗನಿರೋಧಕ ಶಕ್ತಿ ಕ್ಷೀಣಿಸುವುದು

ಕರುಳಿನ ಆರೋಗ್ಯ ಹದಗೆಡುವುದರಿಂದ ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದ ದೇಹವು ಬೇಗನೆ ಬೇರೆ ಸೋಂಕುಗಳಿಗೆ ತುತ್ತಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net