ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ ವಿಶೇಷತೆಗಳಿವು

ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ
ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ
Published on
largest shivling

ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ

ಜ.18ರಂದು ಬಿಹಾರದ ವಿರಾಟ ರಾಮಾಯಣ ಮಂದಿರದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ಈ ಭವ್ಯವಾದ ದೃಶ್ಯ ನೋಡುಗರನ್ನು ಒಂದು ನಿಮಿಷ ರೋಮಾಂಚನಗೊಳಿಸಿತು.
largest shivling

ವಿರಾಟ ರಾಮಾಯಣ ಮಂದಿರ

ಬಿಹಾರದ ಮೋತಿಹಾರಿ ಜಿಲ್ಲೆಯ ವಿರಾಟ ರಾಮಾಯಣ ಮಂದಿರದಲ್ಲಿ ಬಹುದಿನಗಳಿಂದ ಕುತೂಹದಲ್ಲಿ ಕಾಯತೊಡಗಿದ್ದ ಬೃಹತ್ ಆಕಾರದ ಶಿವಲಿಂಗವನ್ನು ನೋಡಲು ಸ್ಥಳೀಯರು ಭಾನುವಾರ (ಜ.18) ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
largest shivling

750 ಟನ್​ ಹೊತ್ತೊಯ್ಯುವ ಸಾಮರ್ಥ್ಯ

ನುರಿತ ಇಂಜಿನಿಯರ್​ಗಳ ಸಹಾಯದಿಂದ 750 ಟನ್​ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದ ಕ್ರೇನ್​ಗಳಿಂದ ಏಕಶಿಲಾ ಶಿವಲಿಂಗವನ್ನು ಗುರುತುಪಡಿಸಲಾದ ಸ್ಥಳದಲ್ಲಿ ಸ್ಥಾಪಿಸಲಾಯಿತು.
largest shivling

210 ಟನ್​ ತೂಕ

33 ಅಡಿ ಎತ್ತರವಿರುವ ಈ ಏಕಶಿಲಾ ಶಿವಲಿಂಗವು ಬರೋಬ್ಬರಿ 210 ಟನ್​ ತೂಕವಿದ್ದು, ಇದನ್ನು 2,500 ಕಿಲೋಮೀಟರ್ ದೂರದಿಂದ ವಿರಾಟ ಮಂದಿರಕ್ಕೆ ತರಲಾಯಿತು. ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರಕ್ಕೆ ಶಿವಲಿಂಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಆ್ಯಕ್ಸಲ್ ಟ್ರಕ್‌ನಲ್ಲಿ ಕರೆತರಲಾಯಿತು.
largest shivling

45 ದಿನಗಳು, 2,500 ಕಿ.ಮೀ

45 ದಿನಗಳು, 2,500 ಕಿ.ಮೀ. ಪ್ರಯಾಣದಲ್ಲಿ ಶಿವಲಿಂಗವು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮಾರ್ಗವಾಗಿ ಸಾಗಿ, ದೇಗುಲವನ್ನು ತಲುಪಿತು.
largest shivling

3 ಕೋಟಿ ವೆಚ್ಚ

3 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಶಿವಲಿಂಗದ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಹೆಲಿಕಾಪ್ಟರ್​ನಿಂದ ಹೂವಿನ ಮಳೆಯನ್ನು ಸುರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತಿಯಿಂದ ಕೈಮುಗಿದು ನಿಂತಿದ್ದ ಜನರು, ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net