ಅಡುಗೆ ಮನೆಯಲ್ಲಿ ಕುಕ್ಕರ್ ಸ್ಫೋಟಕ್ಕೆ ಕಾರಣವಾಗಲು ಇವುಗಳೇ ಕಾರಣ! Pressure Cooker blast

ಕುಕ್ಕರ್ ಬಳಕೆ
ಕುಕ್ಕರ್ ಬಳಕೆ
Published on
Pressure Cooker blast

ಕುಕ್ಕರ್ ಬಳಕೆ

ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಬಳಕೆ ಎಷ್ಟು ಸುಲಭವೋ, ಅಷ್ಟೇ ಅಪಾಯಕಾರಿ ಕೂಡ ಹೌದು. ಸ್ವಲ್ಪ ಅಜಾಗರೂಕತೆ ವಹಿಸಿದರೂ ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಕುಕ್ಕರ್ ಬ್ಲಾಸ್ಟ್ ಆಗಲು ಪ್ರಮುಖ 5 ಕಾರಣಗಳು ಇಲ್ಲಿವೆ:
Pressure Cooker blast

ವೆಂಟ್ ಪೈಪ್‌ ಅಥವಾ ವಿಶಲ್​ ಬ್ಲಾಕ್

ಕುಕ್ಕರ್ ಸ್ಫೋಟಕ್ಕೆ ಇದು ಅತಿ ಮುಖ್ಯ ಕಾರಣ. ಕುಕ್ಕರ್‌ನ ಮುಚ್ಚಳದಲ್ಲಿರುವ ವೆಂಟ್ ಪೈಪ್‌ನಲ್ಲಿ ಅನ್ನದ ಅಗುಳು ಅಥವಾ ಬೇಳೆ ಸಿಕ್ಕಿಹಾಕಿಕೊಂಡರೆ, ಒಳಗಿನ ಹಬೆ ಹೊರಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಒಳಗಿನ ಒತ್ತಡ ಮಿತಿಮೀರಿ ಸ್ಫೋಟ ಸಂಭವಿಸುತ್ತದೆ.
Pressure Cooker blast

ಗುಣಮಟ್ಟವಿಲ್ಲದ ಗ್ಯಾಸ್ಕೆಟ್

ಕುಕ್ಕರ್‌ನ ರಬ್ಬರ್ ರಿಂಗ್ ಅಥವಾ ಗ್ಯಾಸ್ಕೆಟ್ ಹಳೆಯದಾಗಿದ್ದರೆ ಅಥವಾ ಸಡಿಲವಾಗಿದ್ದರೆ ಹಬೆ ಸರಿಯಾಗಿ ಹೊರಹೋಗದೆ ಒಳಗೇ ಒತ್ತಡ ನಿರ್ಮಾಣವಾಗುತ್ತದೆ. ಹಾಗೆಯೇ, ಕಳಪೆ ಗುಣಮಟ್ಟದ ರಬ್ಬರ್ ಬಳಸುವುದು ಕೂಡ ಸುರಕ್ಷಿತವಲ್ಲ.
Pressure Cooker blast

ಕುಕ್ಕರ್‌ನಲ್ಲಿ ಅತಿಯಾದ ನೀರು ತುಂಬುವುದು

ಪ್ರತಿಯೊಂದು ಕುಕ್ಕರ್‌ಗೂ ಒಂದು ನಿರ್ದಿಷ್ಟ ಸಾಮರ್ಥ್ಯವಿರುತ್ತದೆ. ಕುಕ್ಕರ್‌ನ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಆಹಾರ ಅಥವಾ ನೀರು ತುಂಬಿದರೆ, ಕುದಿಯುವಾಗ ಆಹಾರವು ವೆಂಟ್ ಪೈಪ್ ಅನ್ನು ಮುಚ್ಚಬಹುದು. ಇದು ಹಬೆಯ ಹರಿವಿಗೆ ಅಡ್ಡಿಪಡಿಸಿ ಸ್ಫೋಟಕ್ಕೆ ದಾರಿ ಮಾಡಿಕೊಡುತ್ತದೆ.
Pressure Cooker blast

ಸೇಫ್ಟಿ ವಾಲ್ವ್ ಸರಿಯಾಗಿಲ್ಲದಿರುವುದು

ವೆಂಟ್ ಪೈಪ್ ಬ್ಲಾಕ್ ಆದಾಗ ಹಬೆ ಹೊರಹೋಗಲು ಇರುವ ಪರ್ಯಾಯ ದಾರಿಯೇ ಸೇಫ್ಟಿ ವಾಲ್ವ್. ಇದು ಹಳೆಯದಾಗಿದ್ದರೆ ಅಥವಾ ತುಕ್ಕು ಹಿಡಿದಿದ್ದರೆ ಸರಿಯಾದ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ಅಂತಹ ಸಮಯದಲ್ಲಿ ಕುಕ್ಕರ್ ಒತ್ತಡ ತಾಳಲಾರದೆ ಸಿಡಿಯುತ್ತದೆ.
Pressure Cooker blast

ಹಾನಿಗೊಳಗಾದ ಕುಕ್ಕರ್ ಬಳಕೆ

ಕುಕ್ಕರ್‌ನ ತಳಭಾಗ ಉಬ್ಬಿದ್ದರೆ ಅಥವಾ ಮುಚ್ಚಳ ಸರಿಯಾಗಿ ಕೂರುತ್ತಿಲ್ಲದಿದ್ದರೆ ಅದನ್ನು ಬಳಸಲೇಬಾರದು. ಹಳೆಯ ಕುಕ್ಕರ್‌ಗಳ ಲೋಹವು ತೆಳುವಾಗುತ್ತಾ ಬರುವುದರಿಂದ ಅವು ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net