ರಾತ್ರಿ ವೇಳೆ ಮೂಗು ಕಟ್ಟಿಕೊಳ್ಳಲು ಇವೇ ಮುಖ್ಯ ಕಾರಣ! ಇರಲಿ ಎಚ್ಚರ...

ಮೂಗು ಕಟ್ಟಿಕೊಳ್ಳುವುದು
ಮೂಗು ಕಟ್ಟಿಕೊಳ್ಳುವುದು
Published on
Nasal Congestion

ಮೂಗು ಕಟ್ಟಿಕೊಳ್ಳುವುದು

ನಮ್ಮ ಅನುದಿನದ ಜೀವನದಲ್ಲಿ ಮೂಗು ಕಟ್ಟಿಕೊಳ್ಳುವುದು ಅತ್ಯಂತ ಸಾಮಾನ್ಯ ಸಮಸ್ಯೆ. ಮೂಗಿನ ಹಾದಿಯಲ್ಲಿರುವ ರಕ್ತನಾಳಗಳು ಮತ್ತು ಅಂಗಾಂಶಗಳು ಉರಿಯೂತಕ್ಕೊಳಗಾಗಿ ಊದಿಕೊಂಡಾಗ ಗಾಳಿಯಾಡಲು ತೊಂದರೆಯಾಗುತ್ತದೆ.
Nasal Congestion

ಶೀತ ಮತ್ತು ವೈರಲ್ ಸೋಂಕುಗಳು

ಶೀತ, ಜ್ವರ ಅಥವಾ ವೈರಲ್ ಸೋಂಕು ಉಂಟಾದಾಗ ಮೂಗಿನಲ್ಲಿ ಲೋಳೆಯ ಉತ್ಪಾದನೆ ಹೆಚ್ಚಾಗಿ, ಮೂಗಿನ ಹಾದಿ ಮುಚ್ಚಿಕೊಳ್ಳುತ್ತದೆ.
Nasal Congestion

ಅಲರ್ಜಿಗಳು

ಧೂಳು, ಹೂವಿನ ಪರಾಗ, ಸಾಕುಪ್ರಾಣಿಗಳ ಕೂದಲು ಅಥವಾ ಹೊಗೆಯಂತಹ ಅಲರ್ಜಿ ಉಂಟುಮಾಡುವ ಅಂಶಗಳಿಗೆ ದೇಹ ಸ್ಪಂದಿಸಿದಾಗ ಮೂಗಿನಲ್ಲಿ ಉರಿಯೂತ ಉಂಟಾಗಿ ಮೂಗು ಕಟ್ಟುತ್ತದೆ.
Nasal Congestion

ಸೈನುಸೈಟಿಸ್

ಸೈನಸ್ ಕುಹರಗಳಲ್ಲಿ ಸೋಂಕು ಅಥವಾ ಊತ ಉಂಟಾದಾಗ, ಅಲ್ಲಿ ಲೋಳೆ ಸಂಗ್ರಹಗೊಂಡು ತೀವ್ರವಾಗಿ ಮೂಗು ಕಟ್ಟಿಕೊಳ್ಳುತ್ತದೆ. ಇದರೊಂದಿಗೆ ತಲೆನೋವು ಕೂಡ ಬರಬಹುದು.
Nasal Congestion

ವಾತಾವರಣದ ಬದಲಾವಣೆ

ವಾತಾವರಣದಲ್ಲಿ ಇದ್ದಕ್ಕಿದ್ದಂತೆ ತಂಪಾದ ಗಾಳಿ ಬೀಸುವುದು, ಒಣ ಹವಾಮಾನ ಅಥವಾ ತೀವ್ರ ಮಾಲಿನ್ಯಕ್ಕೆ ಒಡ್ಡಿಕೊಂಡಾಗ ಮೂಗಿನ ಒಳಗಿನ ಪೊರೆ ಒಣಗಿ ಮೂಗು ಕಟ್ಟುತ್ತದೆ.
Nasal Congestion

ಡಿಎನ್‌ಎಸ್

ಮೂಗಿನ ಹೊಳ್ಳೆಗಳನ್ನು ಬೇರ್ಪಡಿಸುವ ನಡು ಮೂಳೆ ಅಥವಾ ಪಟೆಯು ನೈಸರ್ಗಿಕವಾಗಿ ಅಥವಾ ಪೆಟ್ಟಾಗುವುದರಿಂದ ಒಂದು ಬದಿಗೆ ವಾಲಿದ್ದರೆ, ಒಂದು ಅಥವಾ ಎರಡೂ ಮೂಗಿನ ಹೊಳ್ಳೆಗಳು ಪದೇ ಪದೇ ಕಟ್ಟಿಕೊಳ್ಳುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net