ನಿಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಕೊಬ್ಬುಗಳಿವು! Healthy Fats

ಅಗತ್ಯ ಕೊಬ್ಬುಗಳು
ಅಗತ್ಯ ಕೊಬ್ಬುಗಳು
Published on
Healthy Fats

ಅಗತ್ಯ ಕೊಬ್ಬುಗಳು

ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಗೆ ದೇಹದಲ್ಲಿ ಕೊಬ್ಬಿನಾಂಶ ಇರಬೇಕಾದುದು ಅತ್ಯಗತ್ಯ. ಆದರೆ ನಾವು ಸೇವಿಸುವ ಕೊಬ್ಬು ಒಳ್ಳೆಯ ಕೊಬ್ಬು ಆಗಿರಬೇಕು. ನಮ್ಮ ದೇಹದ ವಿವಿಧ ಅಂಗಾಂಗಗಳ ಸುಗಮ ಕಾರ್ಯನಿರ್ವಹಣೆಗೆ, ಹಾರ್ಮೋನ್‌ಗಳ ಸಮತೋಲನಕ್ಕೆ ಮತ್ತು ಜೀವಕೋಶಗಳ ರಕ್ಷಣೆಗಾಗಿ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಆರೋಗ್ಯಕರ ಕೊಬ್ಬುಗಳಿವು.
Healthy Fats

ಒಮೆಗಾ-3 ಕೊಬ್ಬಿನ ಆಮ್ಲಗಳು

ಮೆದುಳಿನ ಚುರುಕುತನ, ಕಣ್ಣಿನ ದೃಷ್ಟಿ ಮತ್ತು ಹೃದಯದ ಆರೋಗ್ಯಕ್ಕೆ ಇದು ಹರಪ್ರಾಣ. ಮೂಲಗಳು: ಅಗಸೆಬೀಜ ಚಿಯಾ ಬೀಜ ಮತ್ತು ಆವಕಾಡೊ.
Healthy Fats

ಮೊನೊ-ಅಪರ್ಯಾಪ್ತ ಕೊಬ್ಬುಗಳು

ಇವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ನೆರವಾಗುತ್ತವೆ. ಮೂಲಗಳು: ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ ಮತ್ತು ಆವಕಾಡೊ.
Healthy Fats

ನೈಸರ್ಗಿಕ ಸ್ಯಾಚುರೇಟೆಡ್ ಕೊಬ್ಬುಗಳು

ಮಿತ ಪ್ರಮಾಣದಲ್ಲಿ ಸೇವಿಸುವ ಶುದ್ಧ ನೈಸರ್ಗಿಕ ಕೊಬ್ಬುಗಳು ಮೂಳೆಗಳ ಬಲವರ್ಧನೆಗೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಮೂಲಗಳು: ಶುದ್ಧ ಹಸುವಿನ ತುಪ್ಪ ಮತ್ತು ಬೆಣ್ಣೆ.
Healthy Fats

ಮಧ್ಯಮ-ಸರಪಳಿ ಟ್ರೈಗ್ಲಿಸರೈಡ್‌ಗಳು

ಇವು ಯಕೃತ್ತಿನಿಂದ ಸುಲಭವಾಗಿ ಜೀರ್ಣಿಸಲ್ಪಟ್ಟು, ದೇಹಕ್ಕೆ ತಕ್ಷಣದ ಶಕ್ತಿ ಮತ್ತು ಚಯಾಪಚಯ ಕ್ರಿಯೆಗೆ ವೇಗ ನೀಡುತ್ತವೆ. ಮೂಲಗಳು: ತೆಂಗಿನ ಎಣ್ಣೆ ಮತ್ತು ಒಣ ಕೊಬ್ಬರಿ.
Healthy Fats

ಆಲ್ಫಾ-ಲಿನೋಲೆನಿಕ್ ಆಮ್ಲ

ಇದು ಸಸ್ಯಹಾರಿಗಳಿಗೆ ಸಿಗುವ ಅತ್ಯುತ್ತಮ ಕೊಬ್ಬಿನ ಆಮ್ಲವಾಗಿದ್ದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲಗಳು: ಸೋಯಾಬೀನ್ ಮತ್ತು ಹಸಿರು ತರಕಾರಿಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net