ಆಫೀಸ್, ಸ್ಕೂಲ್ ಮತ್ತು ಜರ್ನಿಗೆ ಬೆಸ್ಟ್ ಪೌಷ್ಟಿಕ ಆಹಾರಗಳಿವು!

ಉತ್ತಮ ಆಹಾರಗಳು
ಉತ್ತಮ ಆಹಾರಗಳು
Published on
Healthy Eating

ಉತ್ತಮ ಆಹಾರಗಳು

ಕೆಲಸ, ಶಾಲೆ ಅಥವಾ ಪ್ರಯಾಣದ ಸಮಯದಲ್ಲಿ ದೇಹಕ್ಕೆ ತಕ್ಷಣದ ಶಕ್ತಿ ನೀಡಲು ಮತ್ತು ಆರೋಗ್ಯವನ್ನು ಕಾಪಾಡಲು ಈ ಆಹಾರಗಳು ಅತ್ಯಂತ ಉತ್ತಮವಾಗಿವೆ.
Healthy Eating

ಬಾಳೆಹಣ್ಣು ಮತ್ತು ಸೇಬು

ಇವುಗಳನ್ನು ಸುಲಭವಾಗಿ ಕೊಂಡೊಯ್ಯಬಹುದು. ಬಾಳೆಹಣ್ಣು ತಕ್ಷಣದ ಶಕ್ತಿಯನ್ನು ನೀಡಿದರೆ, ಸೇಬು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
Healthy Eating

ಒಣ ಹಣ್ಣುಗಳು ಮತ್ತು ಬೀಜಗಳು

ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಅಖ್ರೋಟ್ ಮಿಶ್ರಣವು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇವುಗಳನ್ನು ಸಣ್ಣ ಡಬ್ಬದಲ್ಲಿಟ್ಟುಕೊಂಡು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.
Healthy Eating

ಮೊಸರನ್ನ ಅಥವಾ ಓಟ್ಸ್

ಪ್ರಯಾಣದ ಸಮಯದಲ್ಲಿ ಅಥವಾ ಮಧ್ಯಾಹ್ನದ ಊಟಕ್ಕೆ ಮೊಸರನ್ನ ಅತ್ಯುತ್ತಮ. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ದೇಹವನ್ನು ತಂಪಾಗಿಡುತ್ತದೆ. ಓಟ್ಸ್ ಕೂಡ ಇಡೀ ದಿನ ಶಕ್ತಿಯುತವಾಗಿರಲು ಸಹಕಾರಿ.
Healthy Eating

ಬೇಯಿಸಿದ ಮೊಟ್ಟೆಗಳು

ಪ್ರೋಟೀನ್‌ ಭರಿತವಾದ ಬೇಯಿಸಿದ ಮೊಟ್ಟೆಗಳನ್ನು ಬೆಳಗಿನ ಉಪಹಾರಕ್ಕೆ ಅಥವಾ ಆಫೀಸ್, ಶಾಲೆಗೆ ತಗೆದುಕೊಂಡು ಹೋಗುವುದು ಸುಲಭ. ಇದು ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ.
Healthy Eating

ರಾಗಿ ಅಂಬಲಿ ಅಥವಾ ಮಜ್ಜಿಗೆ

ಕೆಲಸದ ಒತ್ತಡದಲ್ಲಿ ಅಥವಾ ಪ್ರಯಾಣದ ದಣಿವನ್ನು ನೀಗಿಸಲು ರಾಗಿ ಅಂಬಲಿ ಅಥವಾ ಮಜ್ಜಿಗೆ ಅತ್ಯುತ್ತಮ ಪಾನೀಯ. ಇದು ದೇಹಕ್ಕೆ ತೇವಾಂಶ ನೀಡುವುದರ ಜೊತೆಗೆ ಆಯಾಸವನ್ನು ಕಡಿಮೆ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net