ಚಳಿಗಾಲದಲ್ಲಿ ಪ್ರವಾಸ ಮಾಡುವಾಗ ಈ 8 ವಸ್ತುಗಳು ತಪ್ಪದೇ ನಿಮ್ಮ ಬ್ಯಾಗ್​ನಲ್ಲಿರಲಿ! Winter Travel

ಈ ವಸ್ತುಗಳು ತುಂಬಾ ಮುಖ್ಯ
ಈ ವಸ್ತುಗಳು ತುಂಬಾ ಮುಖ್ಯ
Published on
Winter Travel

ಈ ವಸ್ತುಗಳು ತುಂಬಾ ಮುಖ್ಯ

ಚಳಿಗಾಲದ ಪ್ರವಾಸವು ಅತ್ಯಂತ ಆಹ್ಲಾದಕರ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಸರಿಯಾದ ಸಿದ್ಧತೆ ಇಲ್ಲದಿದ್ದರೆ ಚಳಿ ನಿಮ್ಮ ಪ್ರವಾಸದ ಮಜವನ್ನು ಕೆಡಿಸಬಹುದು. ಹೀಗಾಗಿ ನಿಮ್ಮ ಬ್ಯಾಗ್‌ನಲ್ಲಿ ಈ 8 ವಸ್ತುಗಳು ಇರಲೇಬೇಕು.
Winter Travel

ಪದರಗಳಾಗಿ ಧರಿಸಬಹುದಾದ ಬಟ್ಟೆ

ಒಂದು ದೊಡ್ಡ ಸ್ವೆಟರ್‌ಗಿಂತ ಪದರಗಳಲ್ಲಿ ಬಟ್ಟೆ ಧರಿಸುವುದು ಉತ್ತಮ. ಥರ್ಮಲ್ ವೇರ್, ಟೀ ಶರ್ಟ್ ಹಾಗೂ ಅದರ ಮೇಲೆ ಒಂದು ಜಾಕೆಟ್ ಅಥವಾ ಸ್ವೆಟರ್ ಇಟ್ಟುಕೊಳ್ಳಿ. ಇದು ದೇಹದ ಉಷ್ಣತೆ ಕಾಪಾಡಲು ಸಹಾಯ ಮಾಡುತ್ತದೆ.
Winter Travel

ಉಣ್ಣೆಯ ಪರಿಕರಗಳು

ತಲೆ ಮತ್ತು ಕಿವಿಗಳ ಮೂಲಕ ಚಳಿ ದೇಹಕ್ಕೆ ಬೇಗ ತಲುಪುತ್ತದೆ. ಆದ್ದರಿಂದ ಮಂಕಿ ಕ್ಯಾಪ್ ಅಥವಾ ಉಣ್ಣೆಯ ಟೋಪಿ, ಕೈಗವಸುಗಳು ಮತ್ತು ಮಫ್ಲರ್ ಕಡ್ಡಾಯವಾಗಿ ನಿಮ್ಮ ಬ್ಯಾಗ್‌ನಲ್ಲಿರಲಿ.
Winter Travel

ಚರ್ಮದ ಆರೈಕೆ ಉತ್ಪನ್ನಗಳು

ಚಳಿಗಾಲದಲ್ಲಿ ಗಾಳಿ ಒಣಗಿರುವುದರಿಂದ ಚರ್ಮ ಬೇಗನೆ ಒಡೆಯುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಲಿಪ್ ಬಾಮ್, ಮಾಯಿಶ್ಚರೈಸರ್ ಅಥವಾ ಕೋಲ್ಡ್ ಕ್ರೀಮ್ ಮತ್ತು ಸನ್ ಸ್ಕ್ರೀನ್ ಲೋಶನ್ ಮರೆಯಬೇಡಿ.
Winter Travel

ಸಾಕ್ಸ್ ಮತ್ತು ಶೂಗಳು

ಪಾದಗಳನ್ನು ಬೆಚ್ಚಗಿಡಲು ಎರಡು ಜೊತೆ ಉಣ್ಣೆಯ ಸಾಕ್ಸ್‌ಗಳನ್ನು ಇಟ್ಟುಕೊಳ್ಳಿ. ನಡೆಯಲು ಆರಾಮದಾಯಕವಾದ ಮತ್ತು ನೀರು ನಿರೋಧಕ ಶೂಗಳನ್ನು ಧರಿಸುವುದು ಉತ್ತಮ.
Winter Travel

ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಚಳಿಗಾಲದಲ್ಲಿ ನೆಗಡಿ, ಕೆಮ್ಮು ಅಥವಾ ಜ್ವರ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಮಾನ್ಯ ಜ್ವರದ ಮಾತ್ರೆಗಳು, ನೋವು ನಿವಾರಕಗಳು, ಬ್ಯಾಂಡೇಜ್ ಮತ್ತು ವೈಯಕ್ತಿಕ ಔಷಧಿಗಳಿರುವ ಚಿಕ್ಕ ಕಿಟ್ ನಿಮ್ಮ ಜೊತೆಗಿರಲಿ.
Winter Travel

ಥರ್ಮಸ್ ಫ್ಲಾಸ್ಕ್

ಪ್ರವಾಸದ ವೇಳೆ ಬಿಸಿ ನೀರು ಅಥವಾ ಚಹಾ ಕುಡಿಯಲು ಒಂದು ಚಿಕ್ಕ ಥರ್ಮಸ್ ಫ್ಲಾಸ್ಕ್ ಇಟ್ಟುಕೊಳ್ಳಿ. ಇದು ನಿಮ್ಮನ್ನು ಹೈಡ್ರೇಟೆಡ್ ಆಗಿಡಲು ಮತ್ತು ದೇಹಕ್ಕೆ ಒಳಗಿನಿಂದ ಉಷ್ಣತೆ ನೀಡಲು ಸಹಾಯ ಮಾಡುತ್ತದೆ.
Winter Travel

ಪವರ್ ಬ್ಯಾಂಕ್

ಕಡಿಮೆ ತಾಪಮಾನದಲ್ಲಿ ಮೊಬೈಲ್ ಫೋನ್ ಬ್ಯಾಟರಿಗಳು ಬೇಗನೆ ಖಾಲಿಯಾಗುತ್ತವೆ. ತುರ್ತು ಸಂದರ್ಭಗಳಲ್ಲಿ ಮತ್ತು ಫೋಟೋ ತೆಗೆಯಲು ಚಾರ್ಜ್ ಉಳಿಸಿಕೊಳ್ಳಲು ಪವರ್ ಬ್ಯಾಂಕ್ ಅತ್ಯಗತ್ಯ.
Winter Travel

ಡ್ರೈ ಫ್ರೂಟ್ಸ್​ ಮತ್ತು ಸ್ನ್ಯಾಕ್ಸ್

ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ಶಕ್ತಿ ನೀಡುವ ಗೋಡಂಬಿ, ಬಾದಾಮಿ, ಎನರ್ಜಿ ಬಾರ್ ಅಥವಾ ಡಾರ್ಕ್ ಚಾಕೊಲೇಟ್‌ಗಳನ್ನು ನಿಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net