ಮೆದುಳಿಗೆ ಮಾರಕ ಈ 5 ಆಹಾರ ಪದಾರ್ಥಗಳು

ಕರಿದ ಆಹಾರ ಪದಾರ್ಥಗಳು
ಕರಿದ ಆಹಾರ ಪದಾರ್ಥಗಳು
Published on
These 5 foods are harmful to the brain

ಕರಿದ ಆಹಾರ ಪದಾರ್ಥಗಳು

ಸಮೋಸ, ಬಜ್ಜಿ ಅಥವಾ ಫ್ರೆಂಚ್ ಫ್ರೈಸ್‌ಗಳಂತಹ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮೆದುಳಿನ ಪಾಲಿಗೆ ಶತ್ರುಗಳು. ಇವುಗಳಲ್ಲಿರುವ ಟ್ರಾನ್ಸ್ ಫ್ಯಾಟ್ ಮೆದುಳಿನ ರಕ್ತನಾಳಗಳಲ್ಲಿ ಉರಿಯೂತ ಉಂಟುಮಾಡುತ್ತವೆ. ಇದು ನೆನಪಿನ ಶಕ್ತಿಯನ್ನು ಕುಂದಿಸುವುದಲ್ಲದೆ, ಮೆದುಳಿನ ಗಾತ್ರವನ್ನು ಕುಗ್ಗಿಸಬಹುದು ಎಂದು ಅಧ್ಯಯನಗಳು ತಿಳಿಸಿವೆ.
These 5 foods are harmful to the brain

ಸಕ್ಕರೆ ಯುಕ್ತ ಪಾನೀಯಗಳು

ಸೋಡಾ ಮತ್ತು ಎನರ್ಜಿ ಡ್ರಿಂಕ್ಸ್‌ಗಳಲ್ಲಿ ಅತಿಯಾದ ಸಕ್ಕರೆ (Fructose) ಇರುತ್ತದೆ. ಇದು ಮೆದುಳಿನಲ್ಲಿ ಹೊಸ ಜೀವಕೋಶಗಳ ಉತ್ಪತ್ತಿಯನ್ನು ತಡೆಯುತ್ತದೆ. ಅತಿಯಾದ ಸಕ್ಕರೆ ಸೇವನೆಯು ಕಲಿಕೆಯ ಸಾಮರ್ಥ್ಯವನ್ನು ಕಡಿಮೆ ಮಾಡಿ, ಅಲ್ಜೈಮರ್ಸ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
These 5 foods are harmful to the brain

ಸ್ನ್ಯಾಕ್ಸ್​

ಚಿಪ್ಸ್, ನೂಡಲ್ಸ್​​ಗಳಲ್ಲಿ ಸೋಡಿಯಂ ಮತ್ತು ಪ್ರಿಸರ್ವೇಟಿವ್‌ಗಳು ಹೆಚ್ಚಾಗಿರುತ್ತವೆ. ಇವು ಮೆದುಳಿನ ರಕ್ಷಣಾತ್ಮಕ ಪದರವನ್ನು ಹಾನಿಗೊಳಿಸಿ, ನರಗಳ ನಡುವಿನ ಸಂವಹನವನ್ನು ನಿಧಾನಗೊಳಿಸುತ್ತವೆ.
These 5 foods are harmful to the brain

ಬಿಳಿ ಬ್ರೆಡ್

ಬಿಳಿ ಬ್ರೆಡ್, ಮೈದಾ ಪಾಸ್ಟಾ ಮತ್ತು ಬಿಳಿ ಅಕ್ಕಿಯಂತಹ ಹೈ-ಗ್ಲೈಸೆಮಿಕ್ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರಿಸುತ್ತವೆ. ಇದು ಮೆದುಳಿನ ಮೇಲೆ ಒತ್ತಡ ಹೇರುತ್ತದೆ.
These 5 foods are harmful to the brain

ಮದ್ಯಪಾನ

ಮೆದುಳು ನೆನಪುಗಳನ್ನು ಸಂಗ್ರಹಿಸುವ ಜಾಗವಾಗಿದ್ದು, ಮದ್ಯವು ಮೆದುಳಿನ 'ಹೀಪೋಕ್ಯಾಂಪಸ್' ಭಾಗದ ಮೇಲೆ ನೇರ ಪರಿಣಾಮ ಬೀರುತ್ತದೆ, ಅತಿಯಾದ ಮದ್ಯಪಾನವು ವಿಟಮಿನ್ ಬಿ1 ಕೊರತೆಯನ್ನು ಉಂಟುಮಾಡಿ ಮೆದುಳಿಗೆ ಹಾನಿಯುಂಟು ಮಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net