ಯೂರಿಕ್ ಆಮ್ಲ ಹೆಚ್ಚಾದ್ರೆ ದೇಹ ನೀಡೋ ಮುನ್ನೆಚ್ಚರಿಕೆಗಳಿವು!

ರಕ್ತದಲ್ಲಿ ಯೂರಿಕ್ ಆಮ್ಲ
ರಕ್ತದಲ್ಲಿ ಯೂರಿಕ್ ಆಮ್ಲ
Published on
Uric Acid Symptoms

ರಕ್ತದಲ್ಲಿ ಯೂರಿಕ್ ಆಮ್ಲ

ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ, ದೇಹದಲ್ಲಿ ಯೂರಿಕ್ ಆಸಿಡ್ ಸ್ಪಟಿಕಗಳು ಕೀಲುಗಳಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತವೆ. ಇದನ್ನು ಸರಿಯಾದ ಸಮಯಕ್ಕೆ ಗುರುತಿಸದಿದ್ದರೆ ತೀವ್ರ ಗೌಟ್ ಅಥವಾ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು.
Uric Acid Symptoms

ಕೀಲು ನೋವು ಮತ್ತು ಉರಿಯೂತ

ಮುಖ್ಯವಾಗಿ ಕಾಲಿನ ಹೆಬ್ಬೆರಳಿನ ಕೀಲುಗಳಲ್ಲಿ ಇದ್ದಕ್ಕಿದ್ದಂತೆ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ನಂತರ ಇದು ಮಣಿಕಟ್ಟು, ಮೊಣಕಾಲು ಮತ್ತು ಕಾಲ್ಬೆರಳುಗಳ ಕೀಲುಗಳಿಗೂ ಹರಡಬಹುದು.
Uric Acid Symptoms

ಕೀಲುಗಳಲ್ಲಿ ಬಾವು

ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾದಂತೆ ಬಾಧಿತ ಕೀಲುಗಳ ಸುತ್ತಲೂ ಚರ್ಮವು ಕೆಂಪಗಾಗಿ, ತೀವ್ರವಾಗಿ ಬಾತುಕೊಳ್ಳುತ್ತದೆ.
Uric Acid Symptoms

ಸ್ಪರ್ಶಿಸಿದರೆ ತೀವ್ರ ನೋವು

ಕೀಲುಗಳ ಭಾಗವು ಅತ್ಯಂತ ಸೂಕ್ಷ್ಮವಾಗುತ್ತದೆ. ಸಣ್ಣ ಬಟ್ಟೆ ಅಥವಾ ಹೊದಿಕೆ ತಾಗಿದರೂ ಸಹ ಕಷ್ಟವಾಗುವಷ್ಟು ಉರಿ ಮತ್ತು ನೋವು ಉಂಟಾಗುತ್ತದೆ.
Uric Acid Symptoms

ಚರ್ಮದ ಕೆರತ ಮತ್ತು ಗಡಸುತನ

ಕೀಲುಗಳ ಸುತ್ತಲಿನ ಚರ್ಮವು ಒಣಗಿ, ತುರಿಕೆ ಅಥವಾ ಕೆರತ ಕಾಣಿಸಿಕೊಳ್ಳಬಹುದು. ಅಲ್ಲದೆ, ಕೀಲುಗಳನ್ನು ಸರಿಯಾಗಿ ಮಡಚಲು ಅಥವಾ ಚಲಿಸಲು ಸಾಧ್ಯವಾಗದೆ ಬಿಗಿತ ಉಂಟಾಗುತ್ತದೆ.
Uric Acid Symptoms

ಮೂತ್ರಪಿಂಡದಲ್ಲಿ ಕಲ್ಲುಗಳು

ದೇಹದಲ್ಲಿ ಅತಿಯಾದ ಯೂರಿಕ್ ಆಮ್ಲ ಶೇಖರಣೆಯಾದಾಗ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಿ, ಬೆನ್ನು ನೋವು, ಮೂತ್ರ ವಿಸರ್ಜನೆ ವೇಳೆ ಉರಿ ಮತ್ತು ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net