ತೂಕ ಇಳಿಸುವ ಪಯಣದಲ್ಲಿ ಸಮತೋಲಿತ ಆಹಾರ ಮತ್ತು ವ್ಯಾಯಾಮದ ಜೊತೆಗೆ ಕೆಲವು ನೈಸರ್ಗಿಕ ಜ್ಯೂಸ್‌ಗಳು ವೇಗವರ್ಧಕವಾಗಿ ಕೆಲಸ ಮಾಡುತ್ತವೆ.
ಬೂದು ಕುಂಬಳಕಾಯಿ ಜ್ಯೂಸ್
ಇದರಲ್ಲಿ ಕ್ಯಾಲೋರಿಗಳು ತೀರಾ ಕಡಿಮೆ ಮತ್ತು ನಾರಿನಂಶ ಸಮೃದ್ಧವಾಗಿದೆ. ಇದು ದೇಹದ ಒಳಗಿನ ಕಸವನ್ನು ಹೊರಹಾಕಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿ ಮತ್ತು ಪುದೀನಾ ಜ್ಯೂಸ್
ಸೌತೆಕಾಯಿಯಲ್ಲಿ ಶೇ. 95 ರಷ್ಟು ನೀರಿನಾಂಶ ಇರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುವುದಲ್ಲದೆ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಪುದೀನಾ ಜೀರ್ಣಕ್ರಿಯೆಯನ್ನು ಸುಧಾರಿಸಿ ಕೊಬ್ಬು ಕರಗಲು ನೆರವಾಗುತ್ತದೆ.
ಸೋರೆಕಾಯಿ ಜ್ಯೂಸ್
ಸೋರೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬಿ ಇರುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದೊಂದು ಅತ್ಯುತ್ತಮ ಆಯ್ಕೆ.
ಕ್ಯಾರೆಟ್ ಮತ್ತು ಬೀಟ್ರೂಟ್ ಜ್ಯೂಸ್
ಕ್ಯಾರೆಟ್‌ನಲ್ಲಿ ಕರಗುವ ನಾರಿನಂಶ ಹೆಚ್ಚಿರುತ್ತದೆ. ಬೀಟ್ರೂಟ್ ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸಿ ವ್ಯಾಯಾಮದ ಸಮಯದಲ್ಲಿ ಹೆಚ್ಚು ಶಕ್ತಿ ನೀಡುತ್ತದೆ. ಈ ಜ್ಯೂಸ್ ಲಿವರ್ ಅನ್ನು ಡಿಟಾಕ್ಸ್ ಮಾಡಲು ಕೂಡ ಸಹಕಾರಿ.
ನಿಂಬೆ ಹಣ್ಣು ಮತ್ತು ಶುಂಠಿ ಪಾನೀಯ
ನಿಂಬೆ ಹಣ್ಣಿನ ವಿಟಮಿನ್ ಸಿ ಮತ್ತು ಶುಂಠಿಯ ಉರಿಯೂತ ನಿವಾರಕ ಗುಣಗಳು ಕೊಬ್ಬನ್ನು ಕರಗಿಸಲು ರಾಮಬಾಣ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.