ಈ ವರ್ಷ ನಡೆದ ಭೀಕರ ಬಸ್-ಅಗ್ನಿ​ ದುರಂತಗಳಿವು!

ಮರೆಯಲಾಗದ ಘಟನೆಗಳಲ್ಲಿ ಹೋಯಿತು ನೂರಾರು ಮಂದಿ ಪ್ರಾಣ
ಮರೆಯಲಾಗದ ಘಟನೆಗಳಲ್ಲಿ ಹೋಯಿತು ನೂರಾರು ಮಂದಿ ಪ್ರಾಣ
Published on
tragedies

ಮರೆಯಲಾಗದ ಘಟನೆಗಳಲ್ಲಿ ಹೋಯಿತು ನೂರಾರು ಮಂದಿ ಪ್ರಾಣ

ಈ ವರ್ಷದಲ್ಲಿ ಸಂಭವಿಸಿದ ಹಲವು ಭೀಕರ ದುರಂತದಿಂದ ಅಮಾಯಕ ಜೀವಗಳು ಬಲಿಯಾಗಿವೆ. ಇಂತಹ ಅಪಘಾತಗಳು ಅನೇಕ ಕುಟುಂಬಗಳಿಗೆ ಕೊನೆ ಕಾಣದ ದುಃಖವನ್ನು ತಂದೊಡ್ಡಿದ್ದು, ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡು ಕಣ್ಣೀರಿಡುವಂತೆ ಮಾಡಿವೆ.
tragedies

ಸುರಂಗ ಕಾಮಗಾರಿ ವೇಳೆ ಕುಸಿತ: 8 ಸಾವು

ಫೆಬ್ರವರಿ 22ರಂದು, ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಯೋಜನೆಯ ಅಡಿಯಲ್ಲಿ ಸುರಂಗ ಕುಸಿಯಿತು. ಈ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದರು.
tragedies

ಕರ್ನೂಲ್​ ಬಸ್​ ದುರಂತ: 19 ಸಾವು

ಅಕ್ಟೋಬರ್ 25ರಂದು ಕರ್ನೂಲ್ ಜಿಲ್ಲೆಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 19 ಪ್ರಯಾಣಿಕರು ಸುಟ್ಟು ಕರಕಲಾದರು. ಚಿನ್ನಟೇಕೂರು ಬಳಿ ವೇಮುರಿ ಕಾವೇರಿ ಟ್ರಾವೆಲ್ಸ್ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆ ಬಸ್​ನಲ್ಲಿ ದಿಢೀರ್​ ಬೆಂಕಿ ಹೊತ್ತಿಕೊಂಡು, ಇಡೀ ಬಸ್​ ಸಂಪೂರ್ಣವಾಗಿ ಭಸ್ಮವಾಯಿತು.
tragedies

ಆರ್​ಟಿಸಿ ಬಸ್​ ದುರಂತ: 19 ಸಾವು

ನವೆಂಬರ್ 3ರಂದು ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ಬಸ್ ಅಪಘಾತ ಸಂಭವಿಸಿತು. ಈ ದುರಂತದಲ್ಲಿಯೂ ಒಟ್ಟ 19 ಜನರು ಮೃತಪಟ್ಟರು. ಆರ್‌ಟಿಸಿ ಬಸ್ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಕಾರಣ, ಬಸ್​ ನಜ್ಜುಗುಜ್ಜಾಯಿತು. ಈ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರು ಬಲಿಯಾದರು.
tragedies

ಅಗ್ನಿ ದುರಂತ: 160 ಮಂದಿ ದುರ್ಮರಣ

ನವೆಂಬರ್ 26ರಂದು ಹಾಂಗ್ ಕಾಂಗ್‌ನ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಅಪಘಾತದಲ್ಲಿ 160 ಜನರು ದುರಂತ ಸಾವನ್ನಪ್ಪಿದರು. ವಾಂಗ್ ಪುಕ್ ಕೋರ್ಟ್ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿಯ ಜ್ವಾಲೆ ವೇಗವಾಗಿ ಹಬ್ಬಿತು. ಬೆಂಕಿಯನ್ನು ನಂದಿಸಲು ಸುಮಾರು 128 ಅಗ್ನಿಶಾಮಕ ವಾಹನಗಳು ಹರಸಾಹಸ ಪಡಬೇಕಾಯಿತು.
tragedies

ಗೋವಾ ಅಗ್ನಿ ದುರಂತ: 25 ಸಾವು

ಡಿಸೆಂಬರ್ 6ರಂದು, ಉತ್ತರ ಗೋವಾದ ಅರ್ಪೋರಾದಲ್ಲಿರುವ ಬಿರ್ಸ್ ನೈಟ್ ಕ್ಲಬ್‌ನಲ್ಲಿ ಮಧ್ಯರಾತ್ರಿ ಅಗ್ನಿ ಕಾಣಿಸಿಕೊಂಡಿತು. ಈ ಅಪಘಾತದಲ್ಲಿ 25 ಜನರು ಸಜೀವ ದಹನವಾದರು. ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್ ಸಿಬ್ಬಂದಿಯಾಗಿದ್ದು, ಕೆಲವರು ಪ್ರವಾಸಿಗರಿದ್ದರು.
tragedies

ಬಸ್​ ದುರಂತ: 9 ಜನರು ಸಾವು

ಡಿಸೆಂಬರ್ 12 ರಂದು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತು. ಭದ್ರಾಚಲಂನಿಂದ ಅನ್ನಾವರಂಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಕಣಿವೆಗೆ ಉರುಳು ಬಿದ್ದಿತು. ಚಿಂತೂರಿನಿಂದ ಮಾರೆಡುಮಿಲ್‌ಗೆ ಹೋಗುವ ಘಾಟಿ ರಸ್ತೆಯಲ್ಲಿ ಅಪಘಾತ ಸಂಭವಿಸಿತು. ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಸಾವನ್ನಪ್ಪಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net