ನಟಿಯರು ಬಟ್ಟೆ ತೊಡುವುದರ ಬಗ್ಗೆ ಆಘಾತಕಾರಿ ಕಮೆಂಟ್ ಮಾಡಿದ ತೆಲುಗು ನಟ ಶಿವಾಜಿ!

ಸಿನಿಮಾ ನಟಿಯರ ಬಟ್ಟೆ ಬಗ್ಗೆ ನಟ ಶಿವಾಜಿ ಶಾಕಿಂಗ್ ಮಾತು
ಸಿನಿಮಾ ನಟಿಯರ ಬಟ್ಟೆ ಬಗ್ಗೆ ನಟ ಶಿವಾಜಿ ಶಾಕಿಂಗ್ ಮಾತು
Published on
Actor Shivaji's shocking statement about the clothes of film actresses

ಸಿನಿಮಾ ನಟಿಯರ ಬಟ್ಟೆ ಬಗ್ಗೆ ನಟ ಶಿವಾಜಿ ಶಾಕಿಂಗ್ ಮಾತು

ಸಿನಿಮಾ ರಂಗ ಒಂದು ಗ್ಲ್ಯಾಮರ್ ಲೋಕ. ಇಲ್ಲಿ ನಟಿಯರ ಡ್ರೆಸ್​ ಬಗ್ಗೆ ವಿವಾದಗಳಾಗುತ್ತವೆ. ಕೆಲವೊಮ್ಮೆ ಒಳ್ಳೆಯ ಮಾತುಗಳು ಕೇಳಿ ಬರುತ್ತವೆ. ಸೋಮವಾರ(ಡಿ. 22) ಹೈದರಾಬಾದ್​ನಲ್ಲಿ ದಂಡೋರ ಚಿತ್ರದ ಪ್ರೀ ರೀಲೀಸ್ ಇವೆಂಟ್​ನಲ್ಲಿ ತೆಲುಗಿನ ಹಿರಿಯ ನಟ ಶಿವಾಜಿ ಮಾಡಿದ ನಟಿಯರ ಬಟ್ಟೆಯ ಬಗೆಗಿನ ಕಮೆಂಟ್​ಗಳು ವಿವಾದದ ಕಿಡಿಯನ್ನು ಹೊತ್ತಿಸಿವೆ.
Saree is beauty for women

ಮಹಿಳೆಯರಿಗೆ ಸೀರೆಯೇ ಸೌಂದರ್ಯ

ದಂಡೋರ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಶಿವಾಜಿ, ನಿನ್ನೆ ಫ್ರೀ ರೀಲೀಸ್ ಇವೆಂಟ್​ನಲ್ಲಿ ನಟಿಯರ ಉಡುಗೆಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರಿಗೆ ಸೀರೆಯೇ ಸೌಂದರ್ಯ, ಮೈ ಕಾಣದಂತೆ ಬಟ್ಟೆ ಧರಿಸಿದ್ರೆ ಅದೇ ದೊಡ್ಡ ಸೌಂದರ್ಯ ಎಂದು ಹೇಳಿದ್ದಾರೆ.
Wear clothes that don't show body parts.

ದೇಹದ ಭಾಗಗಳು ಕಾಣದಂತೆ ಬಟ್ಟೆ ಧರಿಸಿ

ಇತ್ತೀಚೆಗೆ ತೆಲುಗಿನಲ್ಲಿ ಅತಿಹೆಚ್ಚು ಟ್ರೋಲ್ ಆದ ಶಬ್ದ(ಸಾಮಾನ್ಲು ಪದ ಬಳಸಿ), ದೇಹದ ಭಾಗ ಕಾಣುವಂತೆ ಬಟ್ಟೆ ಧರಿಸಿದ್ರೆ ಅದರಲ್ಲಿ ಯಾವುದೇ ಮೌಲ್ಯವೇ ಇರೋದಿಲ್ಲ. ಜನರು ನೋಡಿ ನಗುತ್ತಾರೆ. ಗ್ಲಾಮರ್​ಗೆ ಗಡಿಗಳು ಇರಬೇಕು. ಚಿಕ್ಕ ಬಟ್ಟೆ ಧರಿಸಿ ದೇಹದ ಅಂಗಗಳನ್ನು ತೋರಿಸುವುದು ಸರಿಯಲ್ಲ. ಸಾವಿತ್ರಿ, ಸೌಂದರ್ಯ, ರಶ್ಮಿಕಾ ರೀತಿ ಆದರ್ಶವಾಗಿರಬೇಕೆಂದು ಹೇಳಿದ್ದಾರೆ.
Shivaji was a hero in the beginning.

ಆರಂಭದಲ್ಲಿ ಹೀರೋ ಆಗಿದ್ದ ಶಿವಾಜಿ

ನಟ ಶಿವಾಜಿಯವರ ಪೂರ್ತಿ ಹೆಸರು ಸೊಂಟಿನೇನಿ ಶಿವಾಜಿ. 1971ರ ಜೂನ್ 30ರಂದು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ಜನಿಸಿದ್ದಾರೆ. ತೆಲುಗು ಚಿತ್ರರಂಗದ ಪ್ರಮುಖ ನಟ, ಡಬ್ಬಿಂಗ್ ಕಲಾವಿದ ಮತ್ತು ರಾಜಕಾರಣಿ. ಮೊದಲು ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಶಿವಾಜಿ, ಬಳಿಕ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Hero in many films including Missamma and Taj Mahal

ಮಿಸ್ಸಮ್, ತಾಜ್​ಮಹಲ್ ಸೇರಿ ಹಲವು ಚಿತ್ರಗಳಲ್ಲಿ ಹೀರೋ

2003ರಲ್ಲಿ ರಿಲೀಸ್ ಆದ ಮಿಸ್ಸಮ್ ಚಿತ್ರದಲ್ಲಿ ಹೀರೋ ಆಗಿ ನಟನೆ. ಬಳಿಕ ಅದಿರಿಂದಯ್ಯ ಚಂದ್ರಂ, ತಾಜ್ ಮಹಲ್​​ನಲ್ಲಿ ನಟಿಸಿದ್ದರು. 2025ರಲ್ಲಿ ಬಂದ ಕೋರ್ಟ್ – ಸ್ಟೇಟ್ ವ್ಸ್ ಎ ನೋಬಡಿಯಲ್ಲಿ ಸಿನಿಮಾದ ವಿಲನ್ ಪಾತ್ರ ಗಮನ ಸೆಳೆದಿದೆ. ಖುಷಿ, ಇಂದ್ರ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಸಹಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. 'ದಿಲ್' ಚಿತ್ರಕ್ಕೆ ನಂದಿ ಪ್ರಶಸ್ತಿ ಪಡೆದಿದ್ದಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net