ಭಾರತದ ನಾರಿ ಪಡೆಯ ಆರ್ಭಟಕ್ಕೆ ದಾಖಲೆಗಳು ಪೀಸ್​ ಪೀಸ್​​!

ಫೈನಲ್‌ಗೆ ಪ್ರವೇಶ
ಫೈನಲ್‌ಗೆ ಪ್ರವೇಶ
Published on
Team India

ಫೈನಲ್‌ಗೆ ಪ್ರವೇಶ

ನಿನ್ನೆ (ಅ.30) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ( Team India ) ಪವಾಡವನ್ನೇ ಪ್ರದರ್ಶಿಸಿತು. ತೀವ್ರ ಒತ್ತಡದಲ್ಲೂ ಅಸಾಧಾರಣ ಪ್ರದರ್ಶನ ನೀಡಿದ ಹರ್ಮನ್​ಪ್ರೀತ್​ ಕೌರ್​ ಪಡೆ, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನ ಅಂತಿಮ ಘಟ್ಟ ಫೈನಲ್‌ಗೆ ಪ್ರವೇಶಿಸಿತು.
Team India

ಒಂದು ಹೆಜ್ಜೆ ಸನಿಹ

ಅಂದಹಾಗೆ, ಫೈನಲ್​ ಪ್ರವೇಶದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಏಕೆಂದರೆ, ನಮ್ಮ ನಾರಿ ಶಕ್ತಿ, ಹಾಲಿ ಚಾಂಪಿಯನ್​ ಮತ್ತು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟ್ರೋಫಿಯನ್ನು ಮುತ್ತಿಕ್ಕಲು ಒಂದು ಹೆಜ್ಜೆ ಸನಿಹದಲ್ಲಿದೆ. ಇದೇ ಆಸ್ಟ್ರೇಲಿಯಾ ತಂಡ ಲೀಗ್​ನಲ್ಲಿ ಭಾರತವನ್ನು ಸೋಲಿಸಿತ್ತು.
Team India

ಜೆಮಿಮಾ ರೊಡ್ರಿಗಸ್ ಶತಕ

ಆಸೀಸ್ ತಂಡ ನೀಡಿದ 339 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ, ಭಾರತದ ಒನ್-ಡೌನ್ ಬ್ಯಾಟ್ಸ್‌ಮನ್ ಜೆಮಿಮಾ ರೊಡ್ರಿಗಸ್ (134 ಎಸೆತಗಳಲ್ಲಿ 127 ರನ್​) ಅಜೇಯ ಶತಕದೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Team India

ಅತ್ಯಧಿಕ ರನ್​ ಚೇಸಿಂಗ್​

ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ತಂಡವು ಮಾಡಿರದ ಅತ್ಯಧಿಕ ರನ್​ ಚೇಸಿಂಗ್​ ಇದಾಗಿದೆ. ಈ ದಾಖಲೆ ಈ ಹಿಂದೆ ಆಸ್ಟ್ರೇಲಿಯಾ ಹೆಸರಿನಲ್ಲಿತ್ತು. 2025ರ ಏಕದಿನ ವಿಶ್ವಕಪ್‌ನ ಲೀಗ್ ಹಂತದ ಭಾಗವಾಗಿ ಭಾರತ ನಿಗದಿಪಡಿಸಿದ 331 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ಬೆನ್ನಟ್ಟಿತ್ತು. ಈಗ ಭಾರತ ಅದೇ ತಂಡದ ವಿರುದ್ಧ 339 ರನ್‌ಗಳ ಗುರಿ ಪೂರ್ಣಗೊಳಿಸಿತು.
Team India

ಇದೇ ಮೊದಲು

ವಿಶ್ವದ ಒಂದು ತಂಡವು ಪುರುಷ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ 300ಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು.
Team India

ಹೆಚ್ಚು ರನ್ ಗಳಿಸಿದ ತಂಡಗಳು

ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ 679 ರನ್ ಗಳಿಸಿದವು. ಈ ಮೂಲಕ ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡಗಳೆಂಬ ಹೆಗ್ಗಳಿಕೆಗೆ ಪಾತ್ರವಾದವು. ಇದಕ್ಕೂ ಮೊದಲು, ಈ ದಾಖಲೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. 2017 ರ ಬ್ರಿಸ್ಟಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಈ ತಂಡಗಳು 678 ರನ್ ಗಳಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net