ಚಳಿಗಾಲದಲ್ಲಿ ಮೂಲಂಗಿ ತಾಜಾ ಮತ್ತು ಸುಲಭವಾಗಿ ಲಭ್ಯವಾಗುತ್ತದೆ. ಇದು ಕಡಿಮೆ ಕ್ಯಾಲರಿ, ಹೆಚ್ಚು ನೀರನ್ನು ಹೊಂದಿರುವುದರಿಂದ ಇದು ಚಳಿಗಾಲದಲ್ಲಿ ಶೀತಲತೆ, ಜ್ವರ, ಜಲದೂಷಣ ಮತ್ತು ಜೀರ್ಣಕ್ರಿಯಾ ಸಮಸ್ಯೆಗಳಿಗೆ ಇದು ಅತ್ಯುತ್ತಮ ಆಹಾರವಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮೂಲಂಗಿಯಲ್ಲಿ ವಿಟಮಿನ್ C ಸಮೃದ್ಧವಾಗಿದ್ದು, ಚಳಿಗಾಲದಲ್ಲಿ ಸಾಮಾನ್ಯ ಜ್ವರ, ಸೆಳೆತು, ಫ್ಲೂ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ರಕ್ಷಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶದಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಚಳಿಗಾಲದಲ್ಲಿ ಹೊಟ್ಟೆಯ ಭಾರ, ಗ್ಯಾಸ್, ಮಲಬದ್ಧತೆ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಹೃದಯ ಆರೋಗ್ಯಕ್ಕೆ ಒಳ್ಳೆಯದು
ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಯಕೃತ್ತು ಆರೋಗ್ಯ ಕಾಪಾಡುತ್ತದೆ
ಯಕೃತ್ತನ್ನು ಶುದ್ಧೀಕರಿಸಿ ವಿಷಕಾರಕಗಳನ್ನು ಹೊರಹಾಕುತ್ತದೆ. ಹಳದಿ ರೋಗ ಚಿಕಿತ್ಸೆಗೂ ಸಹಾಯಕವಾಗಿದೆ.
ತೂಕ ನಿಯಂತ್ರಣಕ್ಕೆ ಸಹಾಯ
ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್ ಮತ್ತು ನೀರು ಇರುವುದರಿಂದ ದೀರ್ಘಕಾಲ ತೃಪ್ತಿ ನೀಡುತ್ತದೆ. ಚಳಿಗಾಲದಲ್ಲಿ ತೂಕ ಹೆಚ್ಚಾಗದಂತೆ ನಿಯಂತ್ರಿಸಲು ಸಹಾಯವಾಗುತ್ತದೆ.