ಮಾಂಸಾಹಾರ ಸೇವಿಸದೆಯೇ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಪಡೆಯಲು ಬಯಸುವವರಿಗಾಗಿ ಅತ್ಯುತ್ತಮ ಸಸ್ಯಹಾರಿ ಪರ್ಯಾಯಗಳು ಇಲ್ಲಿವೆ.
ಪನೀರ್
ಭಾರತೀಯ ಅಡುಗೆಯಲ್ಲಿ ಪ್ರೊಟೀನ್‌ಗೆ ಇದು ಅತ್ಯುತ್ತಮ ಆಯ್ಕೆ. 100 ಗ್ರಾಂ ಪನೀರ್‌ನಲ್ಲಿ ಸುಮಾರು 18-20 ಗ್ರಾಂ ಪ್ರೊಟೀನ್ ಜೊತೆಗೆ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ, ಇದು ಮೂಳೆಗಳ ಆರೋಗ್ಯಕ್ಕೆ ಸಹಕಾರಿ.
ಬೇಳೆ ಮತ್ತು ಕಾಳುಗಳು
ತೊಗರಿ ಬೇಳೆ, ಹೆಸರು ಬೇಳೆ, ರಾಜ್ಮಾ ಹಾಗೂ ಕಪ್ಪು ಕಡಲೆಯಲ್ಲಿ ಪ್ರೊಟೀನ್ ಮತ್ತು ನಾರಿನಾಂಶ ಹೇರಳವಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ಟೋಫು
ಸೋಯಾ ಹಾಲಿನಿಂದ ತಯಾರಿಸಲಾಗುವ ಟೋಫು, ನೋಡಲು ಪನೀರ್‌ನಂತೆಯೇ ಇರುತ್ತದೆ. ತೂಕ ಇಳಿಸಿಕೊಳ್ಳಲು ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಬಯಸುವವರಿಗೆ ಇದು ಕಡಿಮೆ ಕ್ಯಾಲೋರಿ ಹೊಂದಿರುವ ಅತ್ಯುತ್ತಮ ಪ್ರೊಟೀನ್ ಮೂಲವಾಗಿದೆ.
ಹಸಿರು ಬಟಾಣಿ
ಇವುಗಳಲ್ಲಿ ಕೇವಲ ಪ್ರೊಟೀನ್ ಮಾತ್ರವಲ್ಲದೆ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿವೆ. ದೈನಂದಿನ ಸಲಾಡ್ ಅಥವಾ ಪಲ್ಯಗಳಲ್ಲಿ ಇದನ್ನು ಬಳಸುವುದರಿಂದ ದೇಹಕ್ಕೆ ಉತ್ತಮ ಪೋಷಣೆ ಸಿಗುತ್ತದೆ.
ಸೋಯಾ ಚಂಕ್ಸ್
ಮಾಂಸಕ್ಕೆ ಅತ್ಯಂತ ಹತ್ತಿರವಾದ ಪರ್ಯಾಯವಿದು. ಇದರಲ್ಲಿ ಅತ್ಯಧಿಕ ಪ್ರೊಟೀನ್ ಇದ್ದು, ಕೇವಲ 100 ಗ್ರಾಂ ಸೋಯಾ ಚಂಕ್ಸ್‌ನಿಂದ ಸುಮಾರು 50 ಗ್ರಾಂನಷ್ಟು ಪ್ರೊಟೀನ್ ಪಡೆಯಬಹುದು. ಇದು ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ.