
ಇತ್ತೀಚೆಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಮಲಬದ್ಧತೆ. ಕೂತಲ್ಲೇ ಕೂರುವುದು, ಆಹಾರದಲ್ಲಿ ನಾರಿನಂಶ ಕೊರತೆ ಕಾಣುವುದು, ದೈಹಿಕ ಚಟುವಟಿಕೆ ಇಲ್ಲದೆ, ವ್ಯಾಯಾಮದ ಅಭಾವ ಹಾಗೂ ಮಲವಿಸರ್ಜನೆಯ ತೀವ್ರತೆಯನ್ನು ತಡೆಯುವುದು ಇದಕ್ಕೆ ಮೂಲಕಾರಣ.
ನೀವು ಈ ಸಮಸ್ಯೆಯಿಂದ ಬಾಧಿತರಾಗಿದ್ದರೆ ಡಾ. ಪಾಲ್ ಮಾಣಿಕ್ಕಂ ಅವರು ನೈಸರ್ಗಿಕವಾಗಿ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಲಹೆ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ 9 ಆಹಾರ ಸೇವನೆ ಅಭ್ಯಾಸ ಮಾಡಿಕೊಳ್ಳುವ ಬಗ್ಗೆ ಸಲಹೆ ಕೊಟ್ಟಿರುವ ಪಟ್ಟಿ ಇಲ್ಲಿದೆ.
ಪಪ್ಪಾಯಿಯಲ್ಲಿರುವ ಪಪೈನ್ ಎನ್ನುವ ಕಿಣ್ವ ಸುಲಭ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಉರಿಯೂತ ನಿವಾರಿಸುತ್ತದೆ. ಇದರಲ್ಲಿರುವ ನಾರಿನಾಂಶವು ಮಲಕ್ಕೆ ಅಗತ್ಯವಾದ ಪ್ರಮಾಣ ಒದಗಿಸಿ, ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಪಪ್ಪಾಯದಲ್ಲಿರುವ ನೀರಿನಾಂಶ ಮಲವನ್ನು ಮೃದುಗೊಳಿಸುತ್ತದೆ.
2 ರಿಂದ ಮೂರು ಕಿವಿ ಹಣ್ಣು ಸೇವನೆ ಮಾಡುವುದು ನೈಸರ್ಗಿಕವಾಗಿ ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಮಲವನ್ನು ಮೆದುಗೊಳಿಸುತ್ತದೆ. ಕಿವಿಯಲ್ಲಿ ಅಕ್ಟಿನಿಡಿನ್ ಕಿಣ್ವ ಇದೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದನ್ನು ಸಿಪ್ಪೆ ಸಹಿತ ತಿನ್ನುವುದು ಇನ್ನೂ ಉತ್ತಮ ಎಂದು ಸಲಹೆ ಕೊಟ್ಟಿದ್ದಾರೆ.
ನೆನಸಿಟ್ಟ ಒಣ ದ್ರಾಕ್ಷಿಯಲ್ಲಿ ಸೋರ್ಬಿಟೋಲ್ ನೈಸರ್ಗಿಕ ಅಂಶವಿದ್ದು ಇದು ಕರುಳಿನ ಚಲನೆಯನ್ನು ಉತ್ತೇಜಿಸಿ, ನಲವು ಸುಲಭವಾಗಿ ಹೊರ ಹೋಗಲು ಸಹಾಯ ಮಾಡುತ್ತದೆ. ನಿತ್ಯ 8-10 ಒಣ ದ್ರಾಕ್ಷಿಯನ್ನು ನೆನೆಸಿ ಬೆಳಿಗ್ಗೆ ಅದನ್ನು ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
ಅಗಸೆ ಬೀಜದಲ್ಲಿ ನಾರಿನಾಂಶ ಹೇರಳವಾಗಿದೆ. ಇದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದನ್ನು ಪುಡಿ ಮಾಡಿ ತಿನ್ನುವುದು ಅಥವಾ ಬೆಚ್ಚಗಿನ ನೀರಿಗೆ ಅಗಸೆ ಬೀಜದ ಪುಡಿ ಹಾಕಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಮಜ್ಜಿಗೆ ಸಲಾಡ್ ಓಟ್ಸ್ಗಳಲ್ಲೂ ಬಳಕೆ ಮಾಡಬಹುದು.
ಪೇರಲ ಹಣ್ಣಿನಲ್ಲಿ ಹೆಚ್ಚು ನಾರಿನಾಂಶವಿದೆ. ಇದು ಜೀರ್ಣಕ್ರಿಯರನ್ನು ಸುಲಭಗೊಳಿಸಿ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ಗೆಣಸಿನಲ್ಲಿ ಕರಗದ ನಾರಿನಾಂಶ ಇರುವ ಕಾರಣ ಕರುಳಿಗೆ ಒಳ್ಳೆಯದು. ಇದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.
ಬೆಂಡೆಕಾಯಿಯಲ್ಲಿರುವ ಮ್ಯೂಸಿಲೇಜ್ ಎನ್ನುವ ಜೆಲ್ ಅಂಶ ಸಮೃದ್ಧವಾಗಿರುತ್ತದೆ. ಇದು ಸಹ ಕರುಳಿನ ಆರೋಗ್ಯಕ್ಕೆ ಸಹಕಾರಿ.