ಬೆಲ್ಲ ಸೇವಿಸುವ ಮುನ್ನ ಎಚ್ಚರ: ಈ ಕಾಯಿಲೆ ಇದ್ದರೆ ತಕ್ಷಣ ನಿಲ್ಲಿಸಿ!

ಬೆಲ್ಲ ಸೇವಿಸುವ ಮುನ್ನ ಎಚ್ಚರ
ಬೆಲ್ಲ ಸೇವಿಸುವ ಮುನ್ನ ಎಚ್ಚರ
Published on
Jaggery Health

ಬೆಲ್ಲ ಸೇವಿಸುವ ಮುನ್ನ ಎಚ್ಚರ

ಬೆಲ್ಲವು ಆರೋಗ್ಯಕ್ಕೆ ಉತ್ತಮವಾದರೂ, ಅದನ್ನು ಅತಿಯಾಗಿ ಸೇವಿಸುವುದು ಕೆಲವು ಜನರಿಗೆ ಸಮಸ್ಯೆಗಳನ್ನು ತಂದೊಡ್ಡಬಹುದು. ಇಂತಹ ಸ್ಥಿತಿ ಇರುವವರು ಬೆಲ್ಲವನ್ನು ಸೀಮಿತವಾಗಿ ಅಥವಾ ಎಚ್ಚರಿಕೆಯಿಂದ ಸೇವಿಸುವುದು ಸೂಕ್ತ.
Jaggery Health

ಸಕ್ಕರೆ ಕಾಯಿಲೆ ಇರುವವರು

ಬೆಲ್ಲವು ನೈಸರ್ಗಿಕ ಸಿಹಿಯಾಗಿದ್ದರೂ, ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿರುತ್ತದೆ. ಇದನ್ನು ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣವೇ ಏರಿಕೆಯಾಗುತ್ತದೆ.
Jaggery Health

ತೂಕ ಇಳಿಸಲು ಯತ್ನಿಸುತ್ತಿರುವವರು

ಬೆಲ್ಲದಲ್ಲಿ ಕ್ಯಾಲೊರಿ ಹಾಗೂ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹದ ತೂಕ ಹೆಚ್ಚಾಗಬಹುದು.
Jaggery Health

ಚರ್ಮದ ಅಲರ್ಜಿ ಮತ್ತು ಕೆಮ್ಮು ಇರುವವರು

ಬೆಲ್ಲದ ಸ್ವಭಾವ ಉಷ್ಣ. ಅತಿಯಾಗಿ ತಿಂದರೆ ಮುಖದ ಮೇಲೆ ಮೊಡವೆ, ಅಲರ್ಜಿ ಅಥವಾ ಚರ್ಮದ ಉರಿ ಕಾಣಿಸಿಕೊಳ್ಳಬಹುದು.
Jaggery Health

ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವವರು

ಹಸಿ ಬೆಲ್ಲ ಅಥವಾ ಸರಿಯಾಗಿ ಸಂಸ್ಕರಿಸದ ಬೆಲ್ಲ ತಿಂದರೆ ಹೊಟ್ಟೆಯುರಿ, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಕೆಡುವ ಸಾಧ್ಯತೆ ಇರುತ್ತದೆ.
Jaggery Health

ಕೀಲು ನೋವು ಇರುವವರು

ಬೆಲ್ಲದಲ್ಲಿರುವ ಅತಿಯಾದ ಸಿಹಿ ಅಂಶವು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಿ ಕೀಲು ನೋವನ್ನು ಉಲ್ಬಣಗೊಳಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net