ನಿದ್ದೆಗೂ ಬಂತು ಬರ! ನಿದ್ರಾಹೀನತೆಯ ಈ 6 ಲಕ್ಷಣಗಳ ಬಗ್ಗೆ ಇರಲಿ ಎಚ್ಚರ.. Insomnia Symptoms

ನಿದ್ರಾಹೀನತೆ  ಎಂದರೇನು?
ನಿದ್ರಾಹೀನತೆ ಎಂದರೇನು?
Published on
Insomnia Symptoms

ನಿದ್ರಾಹೀನತೆ ಎಂದರೇನು?

ನಿದ್ರಾಹೀನತೆ ಕೇವಲ ದಣಿವಲ್ಲ, ಅದು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಧುಮೇಹದಂತಹ ಸಮಸ್ಯೆ ಇರುವವರಿಗೆ ಇದು ಇನ್ನಷ್ಟು ಸವಾಲಿನದ್ದಾಗಿರಬಹುದು.
Insomnia Symptoms

ರಾತ್ರಿ ನಿದ್ರಿಸಲು ಕಷ್ಟವಾಗುವುದು

ಹಾಸಿಗೆಯ ಮೇಲೆ ಮಲಗಿದರೂ ಗಂಟೆಗಳ ಕಾಲ ನಿದ್ರೆಯಿಲ್ಲದೆ ಹೊರಳಾಡುವುದು ಇದರ ಮೊದಲ ಸಂಕೇತ. ಮನಸ್ಸಿನಲ್ಲಿ ಆಲೋಚನೆಗಳು ಓಡುತ್ತಿರುವುದು ಅಥವಾ ಸುಮ್ಮನೆ ಕಣ್ಣು ಬಿಟ್ಟು ಕುಳಿತಿರುವುದು ನಿದ್ರಾಹೀನತೆಯ ಲಕ್ಷಣ.
Insomnia Symptoms

ಮಧ್ಯರಾತ್ರಿಯಲ್ಲಿ ಪದೇ ಪದೇ ಎಚ್ಚರವಾಗುವುದು

ಒಮ್ಮೆ ನಿದ್ರೆ ಬಂದರೂ, ರಾತ್ರಿಯಿಡೀ ಸತತವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಪದೇ ಪದೇ ಎಚ್ಚರವಾಗುವುದು ಮತ್ತು ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರಿಸಲು ಹರಸಾಹಸ ಪಡಬೇಕಾಗುತ್ತದೆ.
Insomnia Symptoms

ಮುಂಜಾನೆ ಬೇಗನೆ ಎಚ್ಚರವಾಗುವುದು

ಅಗತ್ಯಕ್ಕಿಂತ ಅತಿ ಬೇಗನೆ (ಉದಾಹರಣೆಗೆ ಬೆಳಗಿನ ಜಾವ 3 ಅಥವಾ 4 ಗಂಟೆಗೆ) ಎಚ್ಚರವಾಗುವುದು ಮತ್ತು ಆನಂತರ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬಾರದಿರುವುದು ನಿದ್ರಾಹೀನತೆಯ ಒಂದು ಮುಖ್ಯ ಚಿಹ್ನೆ.
Insomnia Symptoms

ಹಗಲಿನಲ್ಲಿ ಅತಿಯಾದ ಆಯಾಸ

ರಾತ್ರಿ ಸರಿಯಾಗಿ ನಿದ್ರೆಯಾಗದ ಕಾರಣ, ಹಗಲಿನಲ್ಲಿ ವಿಪರೀತ ಸುಸ್ತು, ಆಕಳಿಕೆ ಮತ್ತು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಇರುವುದು. ಇದು ನಿಮ್ಮ ದೈನಂದಿನ ಕೆಲಸದ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
Insomnia Symptoms

ಕಿರಿಕಿರಿ ಮತ್ತು ಮಾನಸಿಕ ಒತ್ತಡ

ನಿದ್ರೆಯ ಕೊರತೆಯಿಂದಾಗಿ ಮನಸ್ಸು ಸದಾ ಅಶಾಂತವಾಗಿರುತ್ತದೆ. ಸಣ್ಣ ವಿಷಯಗಳಿಗೂ ಸಿಟ್ಟು ಬರುವುದು, ಕಿರಿಕಿರಿ ಉಂಟಾಗುವುದು ಅಥವಾ ಖಿನ್ನತೆಯಂತಹ ಭಾವನೆಗಳು ಮೂಡುವುದು ಸಹಜ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net