ಸೀಗಡಿ ಮೀನು ರುಚಿಕರ ಮಾತ್ರವಲ್ಲ, ದೇಹದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಸೀಗಡಿಯಲ್ಲಿ ಪ್ರೋಟೀನ್, ವಿಟಮಿನ್ ಬಿ12, ಒಮೆಗಾ-3 ಕೊಬ್ಬಿನಾಮ್ಲ ಹಾಗೂ ಸಾಟಿ ಇಲ್ಲದ ಖನಿಜಾಂಶಗಳ ಸಮೃದ್ಧ ನಿಧಿಯಿದೆ.
ತೂಕ ನಿಯಂತ್ರಣ ಹಾಗೂ ಸ್ನಾಯುಗಳ ಬಲ
ಸೀಗಡಿಯಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಂಶ ಅತ್ಯಂತ ಕಡಿಮೆ ಇದ್ದು, ಪ್ರೋಟೀನ್ ಪ್ರಮಾಣ ಹೆಚ್ಚಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಕ್ತ ಆಹಾರ.
ಹೃದಯದ ಆರೋಗ್ಯ
ಇದರಲ್ಲಿರುವ 'ಒಮೆಗಾ-3' ಫ್ಯಾಟಿ ಆಸಿಡ್‌ಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಾಗೂ ಹೃದಯಾಘಾತದ ಅಪಾಯವನ್ನು ತಡೆಯಲು ನೆರವಾಗುತ್ತವೆ.
ಮೂಳೆಗಳ ಸದೃಢತೆ
ಸೀಗಡಿಯಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಂ ಹೇರಳವಾಗಿದ್ದು, ಇದು ಮೂಳೆ ಹಾಗೂ ಹಲ್ಲುಗಳನ್ನು ಬಲಪಡಿಸುತ್ತದೆ.
ಮಿದುಳಿನ ಚುರುಕುತನ
ಸೀಗಡಿಯಲ್ಲಿ 'ಅಸ್ಟಾಕ್ಸಾಂಥಿನ್' ಎಂಬ ಪ್ರಬಲ ಆಂಟಿಆಕ್ಸಿಡೆಂಟ್ ಇದ್ದು, ಇದು ಮಿದುಳಿನ ಜೀವಕೋಶಗಳನ್ನು ರಕ್ಷಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೌಂದರ್ಯ ಹಾಗೂ ಚರ್ಮದ ರಕ್ಷಣೆ
ಸೀಗಡಿಯಲ್ಲಿರುವ ಸತು ಮತ್ತು ಆಂಟಿಆಕ್ಸಿಡೆಂಟ್‌ಗಳು ಮುಖದ ಮೇಲಿನ ಸುಕ್ಕುಗಳನ್ನು ತಡೆದು, ಚರ್ಮ ಮತ್ತು ಕೂದಲು ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತವೆ.