ಬಾಲಿವುಡ್ ಚಿತ್ರರಂಗದ ಹಿರಿಯ ನಟಿಯರಾದ ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಜತೆಗೂಡಿ ನಡೆಸಿಕೊಡುವ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಟಾಕ್ ಶೋ ಸದ್ಯ ಹಿಂದಿ ವೀಕ್ಷಕರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ.
ಒಬ್ಬನನ್ನೇ ಇಬ್ಬರು ಇಷ್ಟಪಡ್ತಿದ್ವಿ
ಈ ಕಾರ್ಯಕ್ರಮದಲ್ಲಿ ಇವರಿಬ್ಬರು ಮಾತನಾಡುವ ಕೆಲವು ವಿಚಾರಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿವೆ. ಅಂತೆಯೇ ಇಲ್ಲೊಂದು ವಿಷಯ ಸದ್ಯ ಸಿನಿಪ್ರಿಯರ ಹುಬ್ಬೇರಿಸಿದೆ.
ದಾಂಪತ್ಯಕ್ಕೂ ಮೊದಲು
ಖನ್ನಾ ಹಾಗೂ ಕಾಜೋಲ್ ತಮ್ಮ ದಾಂಪತ್ಯಕ್ಕೂ ಮೊದಲು ಬಾಲಿವುಡ್ನ ಒಬ್ಬ ಸ್ಟಾರ್ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದರಂತೆ. ನಟಿಮಣಿಯರ ಈ ಹೇಳಿಕೆ ಸದ್ಯ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಊಹಾಪೋಹ, ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದೆ.
ಇಬ್ಬರು ಸ್ಟಾರ್ ನಟರ ಹೆಸರು ಮುನ್ನೆಲೆಗೆ
ಕಾಜೋಲ್ ಮತ್ತು ಖನ್ನಾ ಹೇಳಿಕೆ ವೈರಲ್ ಆಗ್ತಿದ್ದಂತೆ ನೆಟ್ಟಿಗರು, ಅಕ್ಷಯ್ ಕುಮಾರ್ ಅಥವಾ ಅಭಿಷೇಕ್ ಬಚ್ಚನ್ ಇರಬೇಕು ಎಂದು ಕಮೆಂಟ್ಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಹೀರೋ ಹೆಸರು ಬಹಿರಂಗಪಡಿಸಿಲ್ಲ
ಕಾಜೋಲ್-ಟ್ವಿಂಕಲ್ ತಮ್ಮ ಹಿಂದಿನ ಪ್ರೇಮ ಸಂಬಂಧಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ಹಿಂದಿ ವೀಕ್ಷಕರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದ್ದಾರೆ.