ವಾರಕ್ಕೊಮ್ಮೆ ಮೀನು ತಿಂದ್ರೆ ಸಿಗುತ್ತೆ ನೋಡಿ ಈ ಹೆಲ್ತ್ ಬೆನಿಫಿಟ್ಸ್!

ಆಹಾರದಲ್ಲಿ ಮೀನು ಸೇವನೆ
ಆಹಾರದಲ್ಲಿ ಮೀನು ಸೇವನೆ
Published on
Fish Benefits

ಆಹಾರದಲ್ಲಿ ಮೀನು ಸೇವನೆ

ಮಾಂಸಹಾರಿಗಳಿಗೆ ಅತ್ಯಂತ ರುಚಿಕರ ಹಾಗೂ ಪ್ರಿಯವಾದ ಆಹಾರ ಮೀನು. ಇದನ್ನು ಫ್ರೈ, ಸಾರು ಅಥವಾ ಗ್ರೇವಿ ಹೀಗೆ ವಿವಿಧ ಶೈಲಿ ಮತ್ತು ಸಾಂಪ್ರದಾಯಿಕ ವಿಧಾನಗಳಲ್ಲಿ ತಯಾರಿಸಿ ಸವಿಯುವುದರಿಂದ ನಾಲಿಗೆಗೆ ರುಚಿ ಹಾಗೂ ದೇಹಕ್ಕೆ ಅದ್ಭುತ ಆರೋಗ್ಯ ಸಿಗುತ್ತದೆ.
Fish Benefits

ಹೃದಯದ ರಕ್ಷಣೆ

ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತವೆ.
Fish Benefits

ಚುರುಕಾದ ಮೆದುಳು

ಇದು ಮೆದುಳಿನ ಜೀವಕೋಶಗಳನ್ನು ಬಲಪಡಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಒತ್ತಡ, ಖಿನ್ನತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.
Fish Benefits

ತೀಕ್ಷ್ಣವಾದ ಕಣ್ಣಿನ ದೃಷ್ಟಿ

ವಿಟಮಿನ್ 'ಎ' ಮತ್ತು ಒಮೆಗಾ-3 ಸಮೃದ್ಧವಾಗಿರುವುದರಿಂದ ವಯೋಸಹಜವಾಗಿ ಕಣ್ಣಿನ ದೃಷ್ಟಿ ಮಂದವಾಗುವುದನ್ನು ಇದು ತಡೆಯುತ್ತದೆ.
Fish Benefits

ಉತ್ತಮ ಪ್ರೊಟೀನ್ ಮೂಲ

ಸ್ನಾಯುಗಳ ಬೆಳವಣಿಗೆಗೆ ಮತ್ತು ಶರೀರದ ಸದೃಢತೆಗೆ ಬೇಕಾಗುವ ಲೀನ್ ಪ್ರೊಟೀನ್ ಮೀನಿನಲ್ಲಿದೆ. ಇದು ತೂಕ ನಿಯಂತ್ರಣಕ್ಕೂ ಸಹಕಾರಿ.
Fish Benefits

ಮೂಳೆಗಳ ಬಲವರ್ಧನೆ

ಮೀನಿನಲ್ಲಿ ನೈಸರ್ಗಿಕವಾಗಿ ವಿಟಮಿನ್ 'ಡಿ' ಮತ್ತು ಕ್ಯಾಲ್ಸಿಯಂ ಇರುವುದರಿಂದ ಮೂಳೆ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಇದು ಬಲು ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net