ರಕ್ತಹೀನತೆಗೆ ಗುಡ್‌ ಬೈ ಹೇಳಿ; ನಿಮ್ಮ ಆಹಾರದಲ್ಲಿರಲಿ ಕಬ್ಬಿಣದ ಅಂಶ ಹೆಚ್ಚಿಸುವ ಈ 5 ಸೂಪರ್ ಫುಡ್ಸ್ | Anemia

ಪಾಲಕ್
ಪಾಲಕ್
Published on
Say Goodbye to Anemia: Include These 5 Superfoods Rich in Iron in Your Diet

ಪಾಲಕ್

ಪಾಲಕ್ ಸೊಪ್ಪು ಕಬ್ಬಿಣದ ಅಂಶದ ಗಣಿಯಾಗಿದ್ದು, ಇದರಲ್ಲಿನ ಕಬ್ಬಿಣದ ಅಂಶದ ಜೊತೆಗೆ ವಿಟಮಿನ್ ಸಿ ಕೂಡ ಇರುತ್ತದೆ, ಇದು ರಕ್ತದಲ್ಲಿನ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸೂಚನೆ: ಸೊಪ್ಪನ್ನು ಅತಿಯಾಗಿ ಬೇಯಿಸುವುದರಿಂದ ಅದರಲ್ಲಿರುವ ಪೌಷ್ಟಿಕಾಂಶಗಳು ಕಡಿಮೆಯಾಗಬಹುದು.
Say Goodbye to Anemia: Include These 5 Superfoods Rich in Iron in Your Diet

ದಾಳಿಂಬೆ

ದಾಳಿಂಬೆ ಹಣ್ಣು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಿಂದ ಸಮೃದ್ಧವಾಗಿದ್ದು, ರಕ್ತಹೀನತೆ ನಿವಾರಿಸಲು ಇರುವ ಅತ್ಯುತ್ತಮ ಹಣ್ಣುಗಳಲ್ಲಿ ಒಂದು. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವುದಲ್ಲದೆ, ದೇಹದಲ್ಲಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ.
Say Goodbye to Anemia: Include These 5 Superfoods Rich in Iron in Your Diet

ಒಣ ದ್ರಾಕ್ಷಿ ಮತ್ತು ಖರ್ಜೂರ

ಒಣ ಹಣ್ಣುಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ವಿಶೇಷವಾಗಿ ಕಪ್ಪು ಒಣ ದ್ರಾಕ್ಷಿ ಮತ್ತು ಖರ್ಜೂರಗಳು ರಕ್ತಹೀನತೆಗೆ ರಾಮಬಾಣ. ಇವು ಶಕ್ತಿಯನ್ನು ನೀಡುವುದರ ಜೊತೆಗೆ ದೇಹದಲ್ಲಿ ತಾಮ್ರ ಮತ್ತು ಕಬ್ಬಿಣದ ಮಟ್ಟವನ್ನು ಸಮತೋಲನದಲ್ಲಿಡುತ್ತವೆ.
Say Goodbye to Anemia: Include These 5 Superfoods Rich in Iron in Your Diet

ಬೆಲ್ಲ

ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸುವುದು ಉತ್ತಮ ಮತ್ತು ತುಂಬಾ ಲಾಭದಾಯಕ. ಬೆಲ್ಲವು ಕಬ್ಬಿಣದ ಅಂಶದ ನೈಸರ್ಗಿಕ ಮೂಲವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ.
Say Goodbye to Anemia: Include These 5 Superfoods Rich in Iron in Your Diet

ಮೊಟ್ಟೆ ಮತ್ತು ಮಾಂಸ

ನೀವು ಮಾಂಸಾಹಾರಿಯಾಗಿದ್ದರೆ, ಮೊಟ್ಟೆ ಮತ್ತು ಕೆಂಪು ಮಾಂಸ (Red Meat) ಕಬ್ಬಿಣದ ಅತ್ಯುತ್ತಮ ಮೂಲಗಳು. ಸಸ್ಯಹಾರಿ ಆಹಾರಕ್ಕಿಂತ ಮಾಂಸಾಹಾರದಲ್ಲಿರುವ ಹೀಮ್ ಐರನ್​​ನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net