ಸ್ಟೈಲಿಶ್​ ಲುಕ್​ನಲ್ಲಿ 'ಮಾ ಇಂಟಿ ಬಂಗಾರಂ' ಸಮಂತಾ

 ಸ್ಟೈಲಿಶ್​ ಲುಕ್​ನಲ್ಲಿ 'ಮಾ ಇಂಟಿ ಬಂಗಾರಂ' ಸಮಂತಾ
Published on: 

ಸೆಲಬ್ರೆಟಿ ಮಾಸ್ಟರ್​ ಚೆಫ್​ ತಮಿಳು ಶೋ ನ ಗ್ರಾಂಡ್​ ಲಾಂಚ್​ ಕಾರ್ಯಕ್ರಮದಲ್ಲಿ ಸಮಂತಾ ರುತ್​ ಪ್ರಭು ಭಾಗಿಯಾಗಿದ್ದರು. ಈ ವೇಳೆ ಅವರು ತೊಟ್ಟ ಕಸೂತಿಯಿಂದ ತುಂಬಿದ್ದ ಬಿಳಿ ಬಣ್ಣದ ಅನಾರ್ಕಲಿಯು, ಸಿಂಪಲ್​ ಮೇಕಪ್​ ಅವರ​ ಅಂದವನ್ನು ಹೆಚ್ಚಿಸಿತ್ತು.

ಗರ್ಭಾವಸ್ಥೆ ರಜೆಯಲ್ಲಿರುವ ಸಮಂತಾ ಅವರು ಸದ್ಯ ಸಿನಿಮಾಗಳಿಗೆ ಬ್ರೇಕ್​ ಕೊಟ್ಟಿದ್ದಾರೆ. ಆದರೆ, ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ಫುಲ್​ ಆಕ್ಟಿವ್​ ಆಗಿದ್ದಾರೆ. ಅವರ ಹೊಸ ಫೋಟೋಶೂಟ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ತುಂಬಾ ಅಂದವಾಗಿದ್ದೀರಿ, ಈ ಹಿಂದೆ ಕಾಣುತ್ತಿದ್ದಕ್ಕಿಂತಲೂ ಹೆಚ್ಚು ಅಂದವಾಗಿ ಕಾಣುತ್ತಿದ್ದೀರಿ, ಹೌ ಪ್ರಿಟಿ ಎಂದು ಫ್ಯಾನ್ಸ್​ ಕಾಮೆಂಟ್​ ಮಾಡಿದ್ದಾರೆ

ಆರೋಗ್ಯ ಸಮಸ್ಯೆ, ನಾಗ ಚೈತನ್ಯ ಅವರೊಂದಿಗಿನ ಬ್ರೇಕಪ್​ ನಂತರ ಸಮಂತಾ ಅವರು ಸಿನಿ ಕ್ಷೇತ್ರದಿಂದ ದೂರ ಉಳಿದಿದ್ದರು. ಶುಭಂ ಸಿನಿಮಾದ ಮೂಲಕ ಮತ್ತೆ ಸಿನಿಮಾಕ್ಕೆ ಕಂಬ್ಯಾಕ್ ಆದರು, ಜೊತೆಗೆ ನಿರ್ಮಾಪಕರಾಗಿ ಬಡ್ತಿ ಪಡೆದುಕೊಂಡರು.

ಸಂಮತಾ ಅವರು ಡಿಸೈನರ್​​ ಮೃಣಾಲಿನಿ ಅವರು ಡಿಸೈನ್​ ಮಾಡಿ 1,35,000 ಬೆಲೆಯ ಪ್ರಾಥ ಒನ್-ಶೋಲ್ಡರ್ ಕೇಪ್ ಡ್ರೆಸ್​ ತೊಟ್ಟಿದ್ದಾರೆ. ಇದು ಶ್ರೀಮಂತ ನೇರಳೆ ಬಣ್ಣದ ಬಟ್ಟೆ, ಇದರ ಮೇಲೆ ಕಸೂತಿ ವರ್ಕ್​ ಮಾಡಿದ್ದು ಇದರ ಅಂದ ಹೆಚ್ಚಿಸಿದೆ

ಕಚ್ಚಾ ಮಾವಿನ ಹಣ್ಣ ಬಣ್ಣದ ಸಿಲ್ಕ್​ ಸೀರೆಯಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ಮನ ಗೆದ್ದಿದ್ದಾರೆ.

ಸಮಂತಾ ಕೋವಿಡ್​ ಕಾಲದಲ್ಲಿ ನಾಗ ಚೈತನ್ಯ ಅವರೊಂದಿಗೆ ಡಿವೋರ್ಸ್ ಪಡೆದುಕೊಂಡರು. ಡಿಸೆಂಬರ್​ 2025ರಲ್ಲಿ ರಾಜ್​ ನಿಡಿಮೋರು ಅವರೊಂದಿಗೆ ಈಶಾ ಫೌಂಡೇಶನ್​ಲ್ಲಿ ಸರಳವಾಗಿ ಮದುವೆಯಾದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net